ವಡಾಪಾವ್ ಕಟಿಂಗ್ ಚಾಯ್

Author : ಕುಮಾರಸ್ವಾಮಿ ತೆಕ್ಕುಂಜ

₹ 160.00
Year of Publication: 2022
Published by: ಜಾಗೃತಿ ಪ್ರಿಂಟರ್ಸ್

Synopsys

ಲೇಖಕ, ಕತೆಗಾರ ಕುಮಾರಸ್ವಾಮಿ ತೆಕ್ಕುಂಜ ಅವರ ಮೊದಲ ಕಥಾ ಸಂಕಲನ "ವಡಾಪಾವ್ ಕಟಿಂಗ್ ಚಾಯ್". ಇದರಲ್ಲಿ ಒಟ್ಟು ಹನ್ನೆರಡು ಕಥೆಗಳಿದ್ದು, ಸಾಹಿತಿ ಸುಬ್ರಾಯ ಚೊಕ್ಕಾಡಿಯವರ ಬೆನ್ನುಡಿಯ ಮಾತುಗಳಿವೆ. ಬಾಲ್ಯಕಾಲದ ತನ್ನೂರಿನ ನೆನಪುಗಳು ಹಾಗೂ ವೃತ್ತಿ ನಿಮಿತ್ತ ತಾನಿದ್ದ ಮುಂಬೈ ನಗರದ ಚಿತ್ರಣವನ್ನು ಇಲ್ಲಿನ ಕತೆಗಳಲ್ಲಿ ಕತೆಗಾರ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಅಲ್ಲಿನ ಕೆಳಮಧ್ಯಮ ಹಾಗೂ ಕೆಳವರ್ಗದ ಜನರ ಬದುಕಿನ ಒಳಸುಳಿಗಳನ್ನು, ತಲ್ಲಣಗಳನ್ನು, ಸಣ್ಣ ಪುಟ್ಟ ಖುಷಿಗಳನ್ನು ಈ ಕತೆಗಳಲ್ಲಿ ದಾಖಲಿಸಿದ್ದಾರೆ.

ಮುಂಬೈ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಸೃಷ್ಟಿಸುವ ವಡಾಪಾವ್ ಕಟ್ಟಿಂಗ್ ಚಾಯ್, ಅನಾಥನಾಥ, ಹಾಗೂ ಮುಂಬೈನಮ್ದೇ ಕತೆಗಳಿಗೆ ಮುಖಾಮುಖಿಯಾಗುವ ಊರಿನ ಸೌದಾಮಿನಿ ಪ್ರಸಂಗ, ಬದುಕು ಜಟಕಾ ಬಂಡಿ, ಅವಲಂಬ, ಭ್ರಾಂತ, ಅಪರಾಧಿ ಮೊದಲಾದ ಕತೆಗಳು ಒಟ್ಟೂ ಬದುಕಿನ ಕಠೋರ ಸತ್ಯಗಳನ್ನು ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ.

About the Author

ಕುಮಾರಸ್ವಾಮಿ ತೆಕ್ಕುಂಜ

ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್‌'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...

READ MORE

Related Books