ಮ್ಯಾಜಿಕ್ ಪೆನ್ಸಿಲ್

Author : ನೇಹಾ ರಾಮಾಪೂರ

Pages 72

₹ 60.00
Year of Publication: 2020
Published by: ಸಾಗರಿ ಪ್ರಕಾಶನ
Address: #275/F6-1, ಫಸ್ಟ್ ಫ್ಲೋರ್, 4ನೇ ಕ್ರಾಸ್, ಉತ್ತರಾದಿಮಠ ರಸ್ತೆ, ಮೈಸೂರು- 570004

Synopsys

‘ಮ್ಯಾಜಿಕ್ ಪೆನ್ಸಿಲ್’ ಬಾಲ ಸಾಹಿತಿ ನೇಹಾ ಲಿಂಗರಾಜ ರಾಮಾಪೂರ ಅವರ ಕತಾ ಸಂಕಲನ. ಮಾಗುವ ಹಂತದಲ್ಲಿರುವ ನೇಹಾಳ ಮನಸ್ಸು-ಬುದ್ಧಿ-ಭಾವಗಳು ಸುತ್ತಲಿನ ಸನ್ನಿವೇಶಗಳಿಗೆ ಸ್ಪಂದಿಸುವ ರೀತಿ, ಮಾನವೀಯ ನೆಲೆಯಲ್ಲಿ ರೂಪಗೊಳ್ಳುವ ವಿಚಾರಗಳು ಇಲ್ಲಿನ ಕತೆಗಳ ಮೂಲಕ ಅನಾವರಣಗೊಂಡಿವೆ. ಸಹಸ್ಪಂದನೆ ಇಂದಿನ ಅಗತ್ಯ. ಮಾನವೀಯತೆ ಮಾಯವಾಗಿ ಸ್ವಾರ್ಥ ತುಂಬಿರುವ ಜಗತ್ತಿನಲ್ಲಿ ಸಕಲ ಚರಾಚರಗಳಲ್ಲಿ ಲೇಸನ್ನು ಬಯಸುವ ಗುಣ ಮಾಯವಾಗುತ್ತಿದೆ. ಮಾನವೀಯತೆಯ ಮೂರ್ತ ರೂಪ ಇಲ್ಲಿಯ ಕತೆಗಳಲ್ಲಿ ಹಾಸು ಹೊಕ್ಕಾಗಿದೆ.

 

About the Author

ನೇಹಾ ರಾಮಾಪೂರ
(14 April 2011)

ಬಾಲ ಪ್ರತಿಭೆ ನೇಹಾ ರಾಮಾಪೂರ ಮೂಲತಃ ಹುಬ್ಬಳ್ಳಿಯವರು. ತಂದೆ - ಲಿಂಗರಾಜ ರಾಮಾಪೂರ. ಬಾಲ್ಯದಿಂದಲೇ ಕಥೆ ಕೇಳುತ್ತಾ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ನೇಹಾ ನಾಲ್ಕನೇ ತರಗತಿಯಲ್ಲಿರುವಾಗಲೇ ಪುಸ್ತಕ ಬರೆದಿದ್ದಾರೆ. ಬಾಲ್ಯದಿಂದ ಅಜ್ಜಿಯಿಂದ ಕತೆ ಕೇಳುತ್ತಿದ್ದ ನೇಹಾ ಅಪ್ಪ ಅಮ್ಮನ ಮಾರ್ಗದರ್ಶನದಲ್ಲಿ ಸ್ವತಃ ಕತೆ ರಚಿಸಿದ್ದಾರೆ. ಈಕೆಯ ಕತೆಗಳು ಚಿಲಿಪಿಲಿ ಪ್ರಕಾಶನದ ಗುಬ್ಬಚ್ಚಿ ಗೂಡು ಮಕ್ಕಳ ದಿನಪತ್ರಿಕೆಯಲ್ಲಿ ಇನ್ನೂ ಕೆಲವು ಕತೆಗಳು ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಶಾಲ್ನುಡಿ ಇ ಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಮ್ಯಾಜಿಕ್ ಪೆನ್ಸಿಲ್’ ಎಂಬ ಕತಾ ಸಂಕಲವನ್ನು ಪ್ರಕಟಿಸಿದ್ದಾರೆ. ...

READ MORE

Related Books