ಸಂಬಂಧಗಳು (ಕಥಾ ಸಂಕಲನ)

Author : ಹಿಪ್ಪರಗಿ ಸಿದ್ದರಾಮ

Pages 264

₹ 380.00
Year of Publication: 2022
Published by: ಗಣಕರಂಗ ಪ್ರಕಾಶನ
Address: ಧಾರವಾಡ
Phone: 9902674005

Synopsys

'ಸಂಬಂಧಗಳುʼ ಕಥಾಸಂಕಲನವು ಲೇಖಕ ಹಿಪ್ಪರಗಿ ಸಿದ್ದರಾಮ ಅವರ ಸಂಪಾದಿತ ಕೃತಿಯಾಗಿದೆ. ಮಾನವೀಯ ಅಂತಃಕರಣದ ಹುಡುಕಾಟದ ಕಥಾಸಂಕಲನ... ಎಂಬ ಉಪಶೀರ್ಷಿಕೆಯನ್ನು ಈ ಪುಸ್ತಕ ಹೊಂದಿದೆ. ಕಥಾಸ್ಪರ್ಧೆಗೆ ಬಂದಿರುವುದರಲ್ಲಿ ಉತ್ತಮವಾದುದಾನ್ನು ಅಯ್ದುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಇಲ್ಲಿನ ಹೆಚ್ಚಿನ ಕಥೆಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿರುವವರ ಅನಭವಗಳು ಕಥೆಗಳಾಗಿ ಇಲ್ಲಿ ಮೂಡಿಬಂದಿದೆ. ಬದುಕಿನ ಸಂಬಂಧಗಳ ಮೌಲ್ಯಗಳನ್ನು ಎತ್ತಿ ಹಿಡಿಯುವ ಇಲ್ಲಿನ ಕಥನಗಳು ಬಿಗಿಯಾದ ನಿಲುವುಗಳನ್ನು ಹೊಂದಿದೆ.

About the Author

ಹಿಪ್ಪರಗಿ ಸಿದ್ದರಾಮ

ಲೇಖಕ,ಕವಿ ಹಿಪ್ಪರಗಿ ಸಿದ್ದರಾಮ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ  ಕೆರೂಟಗಿ ಗ್ರಾಮದವರು. ಪ್ರಸ್ತುತ ಧಾರವಾಡದಲ್ಲಿ ಗಣಕರಂಗ ಸಂಸ್ಥೆಯ ಮೂಲಕ ಸಾಹಿತ್ಯ, ರಂಗಭೂಮಿ, ಕಿರುತೆರೆ-ಹಿರಿತೆರೆ, ಸಂಘಟನೆ, ಬೀದಿನಾಟಕ,ಜನಜಾಗೃತಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಬಿಡಿ ಲೇಖನಗಳು,ಕವನ, ಲೇಖನಗಳು ಕನ್ನಡ ಬ್ಲಾಗಿನಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನಾಟಕ, ಧಾರವಾಹಿ, ಚಲನಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ತಾವು ಬರೆದ ನಾಟಕಗಳನ್ನು ನಿರ್ದೇಶಿಸಿದ್ದಾರೆ.  ಕೃತಿಗಳು; ಹೆಸರಿಲ್ಲದವರು, ಹೂ ಹಾಸಬೇಕಿದೆ, ವಿಕಿರಣಗಳು (ಕವನ ಸಂಕಲನಗಳು), ಸೂರ್ಯಮಾನ್ಯ, ಕಾಶೀಬಾಯಿ ಕೇರಾಪ್‌ ಸಾವಿತ್ರಿಬಾಯಿ, ಮೈಲಾರಲಿಂಗೇಶ್ವರ, ರಮಾಬಾಯಿ, ಪೂನಾಒಪ್ಪಂದ, ಅರೋಗ್ಯ ಭಾಗ್ಯ, ಬಾಬೂಜಿ, ದಾನಮ್ಮನ ಕನ್ನಡ ...

READ MORE

Related Books