ಸಂಪಿಗೆಯ ಪರಿಮಳ

Author : ಅದೀಬ್ ಅಖ್ತರ್‌

Pages 144

₹ 140.00
Year of Publication: 2023
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

`ಸಂಪಿಗೆಯ ಪರಿಮಳ’ ಅದೀಬ್‌ ಅಖ್ತರ್‌ ಅವರ ಕಥಾಸಂಕಲನವಾಗಿದೆ. 'ಪಂಜರ' ತನ್ನ ಕಥಾವಸ್ತುವಿನಿಂದ ಥಟ್ಟನೆ ಗಮನ ಸೆಳೆಯುವ ಕಥೆ. ಕಥೆ ಸ್ವಲ್ಪ ಮಾತ್ರ ಜನಪ್ರಿಯ ಧಾಟಿಯಲ್ಲಿದ್ದರೂ ವಸ್ತು ಮತ್ತು ಅದನ್ನು ಪ್ರಸ್ತುತಪಡಿಸುವ ವಿಧಾನದಿಂದ ಇಷ್ಟವಾದ ಕಥೆ. `ಹೆಣ್ಣು ಭ್ರೂಣಹತ್ಯೆ ಸಮಾಜದ ಬಹುಚರ್ಚಿತ ವಿಷಯ. ಅಂಥ ಸುಳಿಯೊಂದರಲ್ಲಿ ಸಿಲುಕಿರುವ ಕಥಾಪಾತ್ರ ಅದರಿಂದ ಬಿಡಿಸಿಕೊಂಡು, ತನಗೆ ದೊರಕುವ ಹಸುಗೂಸನ್ನು, ಮಾಡಿದ ಪಾಪಕ್ಕೆ ಪಾಯಶ್ಚಿತ್ತವೆಂಬಂತೆ ಸಾಕುವ ನಿರ್ಧಾರ ತೆಗೆದುಕೊಳ್ಳುವಲ್ಲಿಗೆ ಕಥೆ ಮುಗಿಯುತ್ತದೆ. ಸರಳತೆ ಮತ್ತು ಕೃತಕತೆಯಿಂದ ತಪ್ಪಿಸಿಕೊಳ್ಳಲು ಕಥೆಗಾರ ಮಾಡಿರುವ ಪಯತ್ನ ಗಮನಾರ್ಹವಾಗಿದೆ.

About the Author

ಅದೀಬ್ ಅಖ್ತರ್‌

ಅದೀಬ್ ಅಖ್ತರ್‌ ಅವರು ಮೂಲತಃ ಮೈಸೂರು ಜಿಲ್ಲೆಯ ಬನ್ನೂರಿನವರು. ಅವರು ವೃತ್ತಿಯಿಂದ ವ್ಯಾಪರಿಗಳು ಪ್ರವೃತ್ತಿಯಿಂದ ಲೇಖಕರು. ಕಾದಂಬರಿ, ಸಣ್ಣ ಕತೆ ಹಾಗು ನಗೆ ಬರಹಗಳನ್ನಲ್ಲದೆ,ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಮತ್ತು ಸಚಿತ್ರ ಲೇಖನಗಳನ್ನು ಬರೆದಿದ್ದಾರೆ. ಧಾರಾವಾಹಿಗೆ ಚಿತ್ರಕತೆ ಹಾಗು ಸಂಭಾಷಣೆ ಸಹ ರಚಿಸಿದ್ದಾರೆ. ಅದೀಬ್ ಅಖ್ತರ್‌ ಅವರು ಮೊದಲು ಉರ್ದು ಸಾಹಿತಿಯಾಗಿದ್ದು, ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಕನ್ನಡ ಬರೆಯಲು ಕಲಿತು ಕನ್ನಡ ಸಾಹಿತ್ಯವನ್ನು ರಚಿಸುತಿದ್ದಾರೆ. ಕೃತಿಗಳು: ಬಹುರೂಪಿ, ಯಾರೇ ಕೂಗಾಡಲಿ ...

READ MORE

Related Books