ಕಳೆದುಕೊಂಡವಳು ಮತ್ತು ಇತರ ಕತೆಗಳು

Author : ಬಿ.ಟಿ.ಜಾಹ್ನವಿ

Pages 95

₹ 45.00
Year of Publication: 1996
Published by: ಪತ್ರಿಕೆ ಪ್ರಕಾಶನ
Address: ಬಸವನಗುಡಿ, ಬೆಂಗಳೂರು- 560004

Synopsys

1996ರಲ್ಲಿ ಪ್ರಕಟವಾದ ಬಿ.ಟಿ. ಜಾಹ್ನವಿ ಅವರ ಮೊದಲ ಕಥಾಸಂಕಲನವಿದು. ಜಾಹ್ನವಿ ಕತೆಗಳಲ್ಲಿ ತಾನು ಕಂಡದ್ದನ್ನು ಜೀವಂತ ಭಾಷೆಯಲ್ಲಿ ಹೇಳುವ ಕಾತರವಿದೆ. ಮಧ್ಯಮ ವರ್ಗದ ತೆಳುವಾದ ವಸ್ತು ಆರಿಸಿಕೊಂಡಾಗಲೂ, ದಲಿತರ ಅನುಭವವನ್ನು ನಿರೂಪಿಸುವಾಗಲೂ ಜಾಹ್ನವಿ ದಟ್ಟವಾಗಿ ತೀವ್ರವಾಗಿ ಬರೆಯುತ್ತಾರೆ. ಬದುಕಿನ ವಿಚಿತ್ರಗಳನ್ನು ಕಂಡು ಎದುರಿಸುವ ದಿಟ್ಟತನದ ಜೊತೆಗೇ ಕಂಡದ್ದನ್ನೆಲ್ಲಾ ಅದರ ಸೊಗಡು ಮತ್ತು ಮುಗ್ಧತೆಯೊಂದಿಗೆ ಹೇಳುವ ಪ್ರತಿಭೆಯನ್ನು ಇವರಲ್ಲಿ ಕಾಣುತ್ತೇವೆ. ಸಾಹಿತಿಗೆ ಬೇಕಾದ ವಸ್ತುನಿಷ್ಠೆ ಮತ್ತು ಮಮತೆ ಇವರಲ್ಲಿ ಉದ್ದಕ್ಕೂ ಕಾಣುವ ವಿಶಿಷ್ಟ ಗುಣವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಬಿ.ಟಿ.ಜಾಹ್ನವಿ

ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಅವರ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ತಂದೆಯ ರಾಜಕೀಯ ಜೀವನದ ಪ್ರೇರಣೆಯಿಂದಾಗಿ ರಾಜಕೀಯದಲ್ಲೂ ತೊಡಗಿರುವ ಜಾಹ್ನವಿ ಸೂಕ್ಷ್ಮವಾಗಿ ಬರೆವ ಲೇಖಕಿ. ಕತೆಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ದಲಿತಹೋರಾಟಗಳಲ್ಲೂ ತೊಡಗಿಕೊಳ್ಳುತ್ತಾರೆ. ಅವರ ಕಥೆಗಳಲ್ಲಿ ಹೆಣ್ಣಿನ ಲೈಂಗಿಕ ಸ್ವತಂತ್ರ್ಯದ ಕುರಿತಾದ ವಿಷಯಗಳು ಚರ್ಚೆಯಾಗುತ್ತವೆ. ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ಬರೆವ ಜಾಹ್ನವಿ ಸಮಾಜದ ಸಮಸ್ಯೆಗಳಿಗೂ ಮಿಡಿಯುತ್ತಾರೆ.  ...

READ MORE

Related Books