ಸೂರ್ಯನ ಕುದುರೆ

Author : ಯು.ಆರ್. ಅನಂತಮೂರ್ತಿ

Pages 104

₹ 70.00




Year of Publication: 2012
Published by: ವಸಂತ ಪ್ರಕಾಶನ
Address: ವಸಂತ ಪ್ರಕಾಶನ, 360, 10/B ಮೇನ್, ಜಯನಗರ 3ನೇ ಬ್ಲಾಕ್, ಬೆಂಗಳೂರು - 11
Phone: 9986020852

Synopsys

ಕನ್ನಡದ ಶ್ರೇಷ್ಠ ಕತೆಗಾರರಾದ ಯು. ಆರ್. ಅನಂತಮೂರ್ತಿಯವರ ಈಚಿನ ಕಥೆಗಳು ಇಲ್ಲಿವೆ. ಲೇಖಕರ ತಾತ್ವಿಕ ಹಾಗೂ ಸೃಜನಶೀಲ ಕಾಳಜಿಗಳು ಹೊಸ ಆಯಾಮಗಳನ್ನು ಗಳಿಸಿರುವ ಸಫಲತೆಯ ಘಟ್ಟ ಇದು. ಮುಖ್ಯವಾಗಿ, ಸಂಕಲನದ 'ಸೂರ್ಯನ ಕುದುರೆ ಕನ್ನಡದಲ್ಲಿ ಮಾತ್ರವಲ್ಲದೆ ಒಟ್ಟು ಭಾರತೀಯ ಸಾಹಿತ್ಯದ ಅತ್ಯಂತ ಪ್ರಮುಖ ಸಾಧನೆಗಳಲ್ಲೊಂದಾಗಿ ಪರಿಗಣಿತವಾಗಿ ದೇಶಾದ್ಯಂತ ಚರ್ಚೆಯಾಗುತ್ತಿರುವ ಕಥೆ. ಮೂಲತಃ ಆಧುನೀಕರಣ ಪ್ರಕ್ರಿಯೆಯನ್ನೇ ಕುರಿತ ವಿಮರ್ಶೆಯಾಗಿರುವ ಈ ಕಥೆ ದೇಶೀ ವ್ಯಕ್ತಿತ್ವ ಮತ್ತು ಆಧುನಿಕ ಅಭಿವೃದ್ಧಿ ದರ್ಶನಗಳ ನಡುವಣ ರೋಮಾಂಚಕಾರಿ ಕಥನದಂತಿದೆ. 

ಹಾಗೆಯೇ 'ಕಾಮರೂಪಿ” ಕಥೆಯಲ್ಲಿ ಸಾಮ್ರಾಜ್ಯ ನಿರ್ಮಾಣದ ಹಿಂದಿನ ಚೈತನ್ಯಗಳ ಸ್ವರೂಪಗಳನ್ನು ಅರ್ಧ ಕಾಮಿಕ್ ಎನ್ನಬಹುದಾದ ಧೋರಣೆಯಲ್ಲಿ ಶೋಧಿಸಲೆತ್ನಿಸಲಾಗಿದೆ *'ಜರತ್ಕಾರು' ಕಥೆಯಲ್ಲಿ ಅಮೂರ್ತ ತಾತ್ವಿಕ ಜಂಜಡಗಳು ಸಂತಾನ ಸೃಷ್ಟಿಯಲ್ಲಿ ಸಿಕ್ಕು ಮೂರ್ತವಾಗುವ ಕ್ರಿಯೆಯ ಚಿತ್ರಣವಿದೆ.

'ಅಕ್ಷಯ’ ಕಥೆಯಲ್ಲಿ ವಸಾಹತುಶಾಹಿ ಮತ್ತು ದೇಶಿ ಸಾಂಸ್ಕೃತಿಕವಾದಗಳ ನಡುವಣ ಘರ್ಷಣೆಯನ್ನು ದೇಶೀವಾದೀ ಸಿದ್ಧಾಂತಗಳಿಗಿಂತ ವಿಭಿನ್ನವಾದ ಕಣ್ಣುಗಳ ಮೂಲಕ ಗ್ರಹಿಸಲಾಗಿದೆ, ಕಳೆದೆರಡು ದಶಕಗಳಲ್ಲಿ ಈ ಕಥೆಗಳ ಹಿಂದಿನ ಆಶಯಗಳನ್ನು ಅನಂತಮೂರ್ತಿಯವರು ವೈಚಾರಿಕವಾಗಿ ಚರ್ಚಿಸಿದ ಘಟ್ಟಗಳಲ್ಲಿ ವಾದ-ವಿವಾದಗಳೆದ್ದಿವೆ. ಆದರೆ, ಇಲ್ಲಿ ಅವೆಲ್ಲ ವೈಚಾರಿಕನ ಸರಳ ಹಾಗೂ ಸ್ಥೂಲ ನಿಲುವುಗಳನ್ನು ಮೀರಿದ ಸಂಕೀರ್ಣ ಕಲಾಕೃತಿಗಳಾಗಿ ರೂಪುಗೊಂಡಿರುವ, ವೈಚಾರಿಕ ಅನಂತಮೂರ್ತಿಯವರನ್ನು ಒಪ್ಪದೇ ಇರುವವರು ಕೂಡ ತಮ್ಮ ಅಪನಂಬಿಕೆಯನ್ನು ಅಮಾನತ್ತಿನಲ್ಲಿರಿಸಿ ಆನಂದಿಸಬಹುದಾದ ಹಾಗೂ ಅಭ್ಯಸಿಸಬೇಕಾದ ಕಥೆಗಳಿವು.

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books