ಜೋಗತಿ ಜೋಳಿಗೆ

Author : ಅನುಪಮಾ ಪ್ರಸಾದ್

Pages 148

₹ 120.00
Year of Publication: 2015
Published by: ಅಹರ್ನಿಶಿ ಪ್ರಕಾಶನ
Address: ಶಿವಮೊಗ್ಗ
Phone: 94491 74662

Synopsys

ಅನುಪಮಾ ಪ್ರಸಾದ್ ಅವರ ಕತಾಸಂಕಲನ “ಜೋಗತಿ ಜೋಳಿಗೆ'. ಒಟ್ಟು ಎಂಟು ಕತೆಗಳಿದ್ದು ಮನುಷ್ಯ ತಾನು ನಿರ್ಮಿಸಿಕೊಂಡ ಸಂಬಂಧಗಳು ಮತ್ತು ಅದರ ಗಟ್ಟಿತನವನ್ನು ಅಲುಗಾಡಿಸಿ ನೋಡುವ ಕತೆಗಳು, ಮನುಷ್ಯ-ಮನುಷ್ಯನ ನಡುವೆ ಮಾತ್ರವಲ್ಲದೆ, ಮನುಷ್ಯ ಪ್ರಕೃತಿಯ ನಡುವಿನ ಸಂಬಂಧಗಳನ್ನೂ ಒರೆಗೆ ಹಚ್ಚಿ ನೋಡುತ್ತವೆ. 'ಇಸುಮುಳ್ಳು' ಕತೆಯ ಕುರಿತಂತೆ ಖ್ಯಾತ ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರರಾವ್ ಹೀಗೆ ಬರೆಯುತ್ತಾರೆ 'ಹಲವು ಆಯಾಮ ಹೊಂದಿರುವ ಸಂಕೀರ್ಣ ಕಥೆ ಇದು. ಹಳ್ಳಿ, ನಗರ, ನಿಸರ್ಗ, ಸ್ಲಮ್ಮು, ನಗರ ಜೀವನದ ನಿಗೂಢಗಳು-ಎಲ್ಲವನ್ನು ಹಕ್ಕಿ ಕಡ್ಡಿಗಳಿಂದ ಗೂಡು ಕಟ್ಟುವಂತೆ ರೂಪಿಸಲು ಸಾಧ್ಯವಾಗಿರುವುದು ವಾಸ್ತವವನ್ನು ಮೀರುವ ಕಲೆಗಾರಿಕೆಯಿಂದ.’ ಪ್ರಶಂಸಿಸಿದ್ದಾರೆ. ಈ ಕತೆಯಲ್ಲಿ ಬರುವ ಸಣ್ಣ ಸಣ್ಣ ವಿವರಗಳಿಗೂ ಅಗಾಧತೆಯನ್ನು ಹೊಳೆಯಿಸುವ ಶಕ್ತಿಯಿದೆ. ಜೋಗತಿ ಜೋಳಿಗೆಯ ಯಮುನಕ್ಕು ವಿಧವೆಯ ಮೂಲಕ ಹೆಣ್ಣಿನ ಒಳ ತುಮುಲಗಳನ್ನು ಅತ್ಯಂತ ಪ್ರಬುದ್ಧತೆಯಿಂದ ಮಂಡಿಸುತ್ತಾರೆ ಅನುಪಮಾ. ನೈತಿಕತೆ ಮತ್ತು ಅನೈತಿಕತೆಯ ನಡುವೆ ಮನುಷ್ಯನ ತೊಳಲಾಟಗಳನ್ನು ಈ ಕತೆ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.

About the Author

ಅನುಪಮಾ ಪ್ರಸಾದ್
(07 October 1971)

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...

READ MORE

Awards & Recognitions

Related Books