ವ್ಯಾಮೋಹದ ಸುಳಿಯಲ್ಲಿ

Author : ಗಿರೀಶ ಜಕಾಪುರೆ

Pages 150

₹ 160.00
Year of Publication: 2021
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಗುಲಬರ್ಗಾ ವಿಶ್ವವಿದ್ಯಾಲಯ ರಸ್ತೆ, ಕಲಬುರಗಿ

Synopsys

ಲೇಖಕ ಗಿರೀಶ್ ಜಕಾಪುರೆ ಅವರ ಸಣ್ಣ ಕಥೆಗಳ ಸಂಕಲನ-ವ್ಯಾಮೋಹದ ಸುಳಿಯಲ್ಲಿ. ಒಟ್ಟು ಹತ್ತು ಕಥೆಗಳಿವೆ. ಸೂಕ್ಷ್ಮ ಅವಲೋಕನ ಹಾಗೂ ಪ್ರಗತಿಪರ ಚಿಂತನೆಗಳಿಂದ ಇಲ್ಲಿಯ ಕಥೆಗಳು ಗಮನ ಸೆಳೆಯುತ್ತವೆ. ಗ್ರಾಮೀಣ ಬದುಕಿನ ತಲ್ಲಣ, ತಳಮಳ, ಕಷ್ಟಗಳು, ದುಃಖ-ದುಮ್ಮಾನ, ಕಲಹ -ಕಾಟಗಳು ಬಹುತೇಕ ಕಥೆಗಳ ವಸ್ತು. ಲೇಖಕ ಮೇಲೆ ಮರಾಠಿ, ಹಿಂದಿ, ಉರ್ದು ಭಾಷೆಗಳ ಪ್ರಭಾವವಿದೆ. ಆದ್ದರಿಂದ, ತಮ್ಮ ಕಥೆಗಳಲ್ಲಿ ಆ ಭಾಷೆಗಳ ಪದಗಳನ್ನು ವಿಪುಲವಾಗಿ ಬಳಸಿಕೊಂಡಿದ್ದಾರೆ. ಆದ್ದರಿಂದ, ಕಥೆಗಳಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಣಬಹುದು. ಮಾನವ ತಾನು ಪ್ರತಿಪಾದಿಸುವ ಬದುಕಿನ ಎಲ್ಲ ಸತ್ಯಗಳನ್ನು ಅನಾವರಣಗೊಳಿಸುವ ದೀರ್ಘ ಯಾನವನ್ನು ಒಡಲಲ್ಲಿ ಇಟ್ಟುಕೊಂಡಿವೆ-ಇಲ್ಲಿನ ಕತೆಗಳು. ಭವಿಷ್ಯದ ಅರಿವಿಲ್ಲದೆ ಕುರುಡು ನಂಬಿಕೆಗಳನ್ನು ನೆಚ್ಚಿ ಮುನ್ನಡೆದಾಗ ಬದುಕು ಬರಡಾಗುವ ಪರಿಯೂ ಕಥೆಗಳಲ್ಲಿದೆ. ಓದುಗರನ್ನು ತನ್ಮಯಗೊಳಿಸಿ ಹೊಸ ಅನುಭವವನ್ನು ನೀಡುತ್ತವೆ.

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books