ಜಂಗಮಕ್ಕಳಿವಿಲ್ಲ

Author : ಸಿದ್ರಾಮ್ ಪಾಟೀಲ

Pages 112

₹ 120.00
Year of Publication: 2021
Published by: ಚಿಗುರೆಲೆ ಪ್ರಕಾಶನ
Address: , # 442/33, ಕರ್ನಾಟಕ ವೃತ್ತ, ಕೆಎಚ್.ಬಿ. ಬಡಾವಣೆ, ನವನಗರ, ಹುಬ್ಬಳ್ಳಿ

Synopsys

ಲೇಖಕ ಸಿದ್ರಾಮ್ ಪಾಟೀಲ ಅವರ ಕಥೆಗಳ ಸಂಕಲನ-ಜಂಗಮಕ್ಕಳಿವಿಲ್ಲ. ಇಲ್ಲಿ.ಒಟ್ಟು 12 ಕಥೆಗಳಿವೆ. ಆ ಪೈಕಿ, 5 ಕಥೆಗಳು ಜೀವ  ವಿಜ್ಞಾನಕ್ಕೆ ಸಂಬಂಧಿಸಿದ ಕಥೆಗಳಿವೆ. ರೋಗ-ರೋಗ ಲಕ್ಷಣಗಳನ್ನು ಹೇಳುತ್ತಲೇ ಆ ಬಗ್ಗೆ ಅರಿವು ಮೂಡಿಸಲು ಕಥೆಗಳ ರೂಪ ನೀಡಿದ್ದು ಇಲ್ಲಿಯ ವೈಶಿಷ್ಟ್ಯ. ಮಹಾಭಾರೆತದ ಕರ್ಣ-ದ್ರೌಪದಿಯರ ಪ್ರಸಂಗ ಕುರಿತ ಒಂದು ಕಥೆ, ಆರ್ಥಿಕತೆ-ಸಾಮಾಜಿಕತೆ ವಸ್ತುವಿರುವ ಕಥೆಯೂ ಇದೆ. 

ಸಾಹಿತಿ ಶ್ರೀಶೈಲ್ ಮುಗದುಮ್ ಮುನ್ನುಡಿ ಬರೆದಿದ್ದು‘ ‘ಇಲ್ಲಿಯ ಕಥೆಗಳು ಅನುಭವ ಜನ್ಯವಾಗಿವೆ. ಆದ್ದರಿಂದ, ಇವು ಸೃಜನಾತ್ಮಕ ರೂಪ ಪಡೆದಿವೆ. ಮನುಷ್ಯರ ಸ್ವಾರ್ಥ, ತೊಳಲಾಟ, ಸಣ್ಣತನ, ಆಂತರಿಕ ತುಮುಲಗಳು, ಗುಣಾವಗುಣಗಳ ಬಗ್ಗೆ ಚರ್ಚಿಸುತ್ತಾ ಪರೋಕ್ಷವಾಗಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವ ಹಾಗೆ ಮಾಡುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

ಸಾಹಿತಿ ಬಾಳಾಸಾಹೇಬ ಲೋಕಾಪುರ ಬೆನ್ನುಡಿ ಬರೆದು ‘ಈ ಕಥೆಗಳ ಓದು ಅನೂಹ್ಯ ಅನುಭವವನ್ನು ಕೊಡುತ್ತವೆ. ದಟ್ಟವಾದ ವಿಷಾದವೊಂದನ್ನು ಹುಟ್ಟಿಸಿ ಬಿಡುತ್ತವೆ. ಓದುಗನನ್ನು ಕಥನ ಕೇಂದ್ರಕ್ಕೆ ಸುಲಭವಾಗಿ ಎಳೆದೊಯ್ಯುವ ಕಥನ ಕಾವ್ಯ ಇಲ್ಲಿ ಸಾಧಿತವಾಗಿದೆ. ಇವು ಕಟ್ಟಿದ ಕಥೆಗಳಾಗಿದ್ದರೂ ಹುಟ್ಟಿದ ಕಥೆನ ಕಲೆಯನ್ನು ಮೈಗೂಡಿಸಿ ಕೊಂಡು ಬಂದಿವೆ’ ಎಂದು ಶ್ಲಾಘಿಸಿದ್ದಾರೆ. 

About the Author

ಸಿದ್ರಾಮ್ ಪಾಟೀಲ

ಲೇಖಕ ಸಿದ್ರಾಮ್ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರೀಕಟ್ಟಿಯವರು. ಹೋಮಿಯೋಪಥಿ (ಬಿ.ಹೆಚ್. ಎಂ.ಎಸ್ )ವೈದ್ಯರು. ನಂತರ ವೃತ್ತಿ  ವಲಯವನ್ನು ಬದಲಿಸಿ ಸದ್ಯ ಬೆಳಗಾವಿಯಲ್ಲಿ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕರು. ರಾಜ್ಯಶಾಸ್ತ್ರದಲ್ಲಿ ಎಂ.ಎ, ಪದವೀಧರರು.  ಕೃತಿಗಳು: ಕೆಂಪು ದಿಣ್ಣೆಯ ಕವಿತೆಗಳು (ಮೊದಲ ಕವನ ಸಂಕಲನ), ಹೆಣ (ಪ್ರಬಂಧ ಸಂಕಲನ), ಮೋಡಕವಿದ ವಾತಾವರಣ ಮತ್ತು ಠಾ ( ಕವನ ಸಂಕಲನ) ಜಂಗಮಕ್ಕಳಿವಿಲ್ಲ (ಕಥಾ ಸಂಕಲನ)  ...

READ MORE

Related Books