ಪಚ್ಚ ಕುದುರೆ

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 216

₹ 150.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 08026617100

Synopsys

ಫಕೀರ ಮುಹಮ್ಮದ್ ಕಟ್ಪಾಡಿ ಅವರ ಐದನೆಯ ಸಂಕಲನವಿದು. ಈ ಸಂಕಲನದಲ್ಲಿ ಒಟ್ಟು ಹದಿನೈದು ಕತೆಗಳಿವೆ. ಪಚ್ಚ ಕುದುರೆಯಲ್ಲಿ ಕಟ್ಪಾಡಿ ಅವರ ಹಿಂದಿನ ಕಥಾಸಂಕಲನ ಅತ್ತರ್‍ ಹಾಜಿಕಾ ಮತ್ತು ಇತರ ಕತೆಗಳು ಸಂಕಲನದ ಕೆಲವು ಕತೆಗಳನ್ನು ಇದರಲ್ಲಿ ಸೇರಿಸಿದ್ದಾರೆ. ಅಜರ್‍ ಎಂಬ ಹುಡುಗ, ಹೆತ್ತತಾಯಿ, ಕಿಡವಾಕನ ಹಜ್ ಯಾತ್ರೆ, ಪಚ್ಚಕುದುರೆ, ಪಾಡು, ಕರಾಮತ್, ಅತ್ತರು ಹಾಜಿಕ, ಹತ್ಯೆ, ಬಂದಿ, ಗಜಲ್ ಎಂಬ ಜಿಂಕೆಯ ಆರ್ತನಾದ, ನವಿಲಾದವಳು, ದಹನ, ನಮ್ಮ ನೆರೆಯಲ್ಲಿ ದೀಪಾವಳಿ, ರಮಜಾನ್ ಬಂತು.

ಸಂಕಲನಕ್ಕೆ ಮುನ್ನುಡಿ ಬರೆದಿರುವ ರಂಜಾನ್ ದರ್ಗಾ ಅವರು ’ಕಟ್ಪಾಡಿಯವರು ತಮ್ಮ ಇಲ್ಲಿನ ಕಥೆಗಳಲ್ಲಿ ತರುವ ಪ್ರದೇಶ, ಪ್ರಾದೇಶಿಕತೆ, ನಿಸರ್ಗ, ಸಂಪ್ರದಾಯ, ಕಾಯಕಗಳ ಸೂಕ್ಷ್ಮತೆ, ಜನಸಮುದಾಯದ ಭಾವಲೋಕ, ಭಾಷಾಲೋಕ, ವಿವಿಧ ಸಮಾಜಗಳ ಮಧ್ಯದ ಒಡನಾಟದೊಳಗಿನ ನಂಬಿಕೆ ಮತ್ತು ಅಪನಂಬಿಕೆ, ಸಹಜ ಬದುಕಿನಲ್ಲಿರುವ ಅವರ ಸಂಬಂಧಗಳು, ಕೋಮುಗಲಭೆಗಳಂಥ ವಿಷಮ ವಾತಾವರಣದಲ್ಲಿರುವ ಅವರ ಆತಂಕಗಳು, ಜಾತಿ ಮತ್ತು ಧರ್ಮಗಳಲ್ಲಿನ ವರ್ಗಗುಣಗಳು ಹೀಗೆ ಎಲ್ಲವನ್ನೂ ಅವರು ಸೂಫಿಯ ಕಣ್ಣುಗಳಿಂದ ನೋಡುತ್ತಾರೆ. ಅಂತೆಯೇ ಅವರ ಕಥೆಗಳ್ಲಿ ಜೀವನ ಪ್ರೇಮ ಉಕ್ಕುತ್ತದೆ. ಮನುಷ್ಯರ ಹುಡುಕಾಟದಲ್ಲಿ ತೋರುವ ಉತ್ಸಾಹ ಎದ್ದು ಕಾಣುತ್ತದೆ. ಜಾತಿ, ಮತ, ಧರ್ಮ, ವರ್ಗ ಮುಂತಾದ ಮುಖವಾಡಗಳನ್ನು ಕಳಚಿಕೊಂಡ ಮಾನವ ಎಷ್ಟೊಂದು ಸುಂದರವಾಗಿ ಕಾಣುತ್ತಾನೆ! ತಮ್ಮ ಕಥೆಗಳಲ್ಲಿ ಈ ಜೀವನ ಸೌಂದರ್ಯವನ್ನು ಹಿಡಿದಿಡುವುದೇ ಕಟ್ಪಾಡಿಯವರ ಆಶಯವಾಗಿದೆ.’ ಎಂದು ವಿವರಿಸಿದ್ದಾರೆ.

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Conversation

Related Books