ತುಂತುರು ಮನ

Author : ಮಲ್ಲಿನಾಥ ಶಿ. ತಳವಾರ

Pages 102

₹ 125.00
Year of Publication: 2022
Published by: ರೇಣು ಪ್ರಕಶನ
Address: #498, ದೂರದರ್ಶನ ನಗರ,ಬೆಳಗಾವಿ-590019
Phone: 9902791799

Synopsys

ತುಂತುರು ಮನ ಮಲ್ಲಿನಾಥ ಎಸ್‌ ಅವರ ಸಂಕಲನವಾಗಿದೆ. ಈ ಕೃತಿಯಲ್ಲಿ ಹೈಕು ಎಂಬ ಸಾಹಿತ್ಯ ಪ್ರಕಾರವು ಜಪಾನ್ ಮೂಲದಿಂದ ಬಂದದ್ದಾಗಿದೆ. ಇದು ಮೂರು ಚರಣಗಳಲ್ಲಿ ಸಂರಚನೆಗೊಂಡಿರುತ್ತದೆ. ಮೊದಲ ಮತ್ತು ಮೂರನೇ ಸಾಲುಗಳು ಮಧ್ಯ ಸಾಲಿನ ಅರ್ಥ, ವಿಚಾರ, ಚಿಂತನೆಗಳ ವಿವರಣೆಯನ್ನು ನೀಡುತ್ತದೆ. ಹೈಕು ಸಾಹಿತ್ಯ ವಿಮರ್ಶೆ ರೂಪದಲ್ಲಿ ಹೆಚ್ಚು ಸಂಕೀರ್ಣವಾಗಿ ಕಾವ್ಯಾತ್ಮಕವಾಗಿ ಬಂದಿದೆ. ತಂಕಾ ಮತ್ತು ಹೈಕು ಸರಳವಾದ ಪದ್ಯ ಪ್ರಕಾರಗಳಾಗಿವೆ. ಇವು ಹದಿನಾರನೆಯ ಶತಮಾನಕ್ಕಿಂತಲೂ ಹಿಂದಿನದಾಗಿದೆ. ಇದರ ಪ್ರಮುಖ ಲೇಖಕರು ಯಮಝರೆ ಸೊಕಾನ ಮತ್ತು ಅರಕಿಡಾ ಮೊರಿಟಾಕೆಯವರು ಆರಂಭಿಕರಾಗಿದ್ದಾರೆ. ನಂತರದ ಯುಗಗಳಲ್ಲಿ ಜಪಾನಿನ ಕವಿಗಳು ವಿಭಿನ್ನ ವಿಷಯವನ್ನು ವಸ್ತುವಾಗಿಸಿಕೊಂಡು ಸಾಹಿತ್ಯ ಕೃಷಿ ಮಾಡಿದ್ದಾರೆ. ಜಾನಪದ, ಐತಿಹಾಸಿಕ ಮತ್ತು ಸಾಹಿತ್ಯಿಕ ಮೂಲಗಳನ್ನು ವ್ಯಾಪಕವಾಗಿ ಬಳಸಿ ಕೊಂಡು ಕಲಾತ್ಮಕ ತಂತ್ರಗಾರಿಕೆಯಿಂದ ಓದುಗರನ್ನು ಆಕರ್ಷಿಸುವ ರೀತಿಯಲ್ಲಿ ನಿರೂಪಿಸಿದ್ದಾರೆ. ಹೈಕುವಿನ ಮುಖ್ಯ ವೈಶಿಷ್ಟ್ಯವೆಂದರೆ ಸಂಕ್ಷೀಪ್ತವಾಗಿ ಕಿರಿಯದರಲ್ಲಿ ಹಿರಿಯ ಅರ್ಥವನ್ನು ಗರ್ಭೀಸಿಕೊಂಡಿರುತ್ತದೆ. ನಮ್ಮ ಜನಪದ ಗಾದೆಗಳ ಸ್ವರೂಪವೇ ಹೈಕುಗಳು. ಗಾದೆ ಮತ್ತು ಹೈಕುಗಳಲ್ಲಿ ವಾಸ್ತವಿಕ, ಜಗತ್ತಿನ ಮನೋಭಾವವನ್ನು ಚಿತ್ರಿತಗೊಳಿಸುತ್ತವೆ. ಗಾದೆಗಳು ಆಕಾರದಲ್ಲಿ ಪದ ಬಳಕೆಯಲ್ಲಿ ದೊಡ್ಡದಾಗಿದ್ದರೂ ವಿಚಾರ ತೀಕ್ಷ್ಣತೆ, ಅರ್ಥವ್ಯಾಪ್ತಿಯಲ್ಲಿ ಸಮಾನವಾಗಿವೆ ಎಂದು ಹೇಳಬಹುದು. ಹೈಕು ಹದಿನೇಳು ಉಚ್ಚಾರಾಂಶಗಳನ್ನು ಹೊಂದಿರುತ್ತದೆ. ಮೊದಲನೆಯ ಚರಣದಲ್ಲಿ ಐದು ಉಚ್ಚಾರಾಂಶಗಳು, ಎರಡನೆಯ ಚರಣದಲ್ಲಿ ಏಳು ಉಚ್ಚಾರಾಂಶಗಳು ಒಳಗೊಂಡು ಮೂರನೆಯ ಚರಣ ಐದು ಉಚ್ಚಾರಾಂಶಗಳನ್ನು ಹೊಂದಿರುತ್ತದೆ. ಹೈಕುಗಳು ಹಲವಾರು ವೈಶಿಷ್ಟ್ಯಗಳನ್ನು, ಸೂಕ್ಷ್ಮ ವ್ಯತ್ಯಾಸಗಳಿಂದ ಕೂಡಿರುತ್ತದೆ. ಶಾಸ್ತ್ರೀಯ ಹೈಕು ಯಾವಾಗಲೂ ಋತುಚಕ್ರದ ಬಗ್ಗೆ ಹೇಳುತ್ತದೆ. ಇದರ ರಾಚನಿಕ ವಿನ್ಯಾಸ ಗಮನಿಸಿದಾಗ ಮೊದಲನೆಯ ಚರಣ ವಿಷಯವನ್ನು ಪ್ರತಿಪಾದಿಸುತ್ತಾ ಹೋಗುತ್ತದೆ. ಎರಡನೆಯ ಚರಣ ಮೇಲಿನ ಚರಣದ ವಿಷಯ ವಸ್ತುವನ್ನು ವಿವರಿಸುತ್ತದೆ. ಮೂರನೆ ಚರಣ ಮೇಲಿನ ಎರಡು ಚರಣಗಳ ಅರ್ಥ ವಿವರಣೆ, ವಿಷಯದ ಪ್ರತಿಪಾದನೆಯ ವಿವರಣೆ ನೀಡಿ ಅರ್ಥ ವಿವರಣೆಯ ತೀರ್ಮಾನವನ್ನು ನಿರ್ಣಯಿಸುತ್ತದೆ, ಸಂಪೂರ್ಣ ಪ್ರಜ್ಞೆಯನ್ನು ಹುಟ್ಟುಹಾಕುವಂತೆ ಚೈತನ್ಯ ಮೂಡಿಸುವಂತಿರಬೇಕು ಎಂಬ ಸದಾಶಯ ಹೊಂದಿದೆ. ಪ್ರತಿಭಾವಂತ ಲೇಖಕರು ಜಪಾನಿನ ಸಂಪ್ರದಾಯ ಸೂಚಿಸಿದಂತೆ ಜನ ಜೀವನದ ಚಿತ್ರಣ, ಜಗತ್ತಿಗೆ ತನ್ನ ಮನೋಧರ್ಮವನ್ನು ತಿಳಿಸಲು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾನೆ. ಹೈಕು ಒಂದು ದೇಶ ಸಂಸ್ಕೃತಿಯನ್ನು ಚಿಂತನಾಶಿಲ ಪ್ರಜ್ಞೆಯನ್ನು ನಿಖರವಾಗಿ ಬಿಂಬಿಸುತ್ತದೆ. ಹೈಕು ಕ್ರಿಯೆಯನ್ನು ವಿವರಿಸುವುದಿಲ್ಲ. ಆದರೆ ಭಾವಗೀತಾತ್ಮಕವಾಗಿ ನಾಯಕ ಪಾತ್ರದ ನಿಜಸ್ಥಿತಿಯನ್ನು ವಿವರಿಸುತ್ತದೆ, ಇದರಲ್ಲಿ ಲೇಖಕನು ಕೂಡ ಸೂಕ್ಷ್ಮಾತಿಸೂಕ್ಷ್ಮ ಚಿಂತನೆ, ಪದಗಳ ಒಳಾರ್ಥವನ್ನು ವಿಶ್ಲೇಷಿಸುತ್ತಾನೆ. ಒಬ್ಬ ಸಮರ್ಥ ಲೇಖಕ ಅತ್ಯಂತ ನಿಖರವಾದ ಅರ್ಥಗರ್ಭಿತ ಪದಗಳನ್ನು ಆಗು ಮಾಡಿಕೊಳ್ಳುತ್ತಾನೆ. ಸಾಮಾಜಿಕ ವ್ಯವಸ್ಥೆಯ, ಮನುಷ್ಯನ ಮನೋಧರ್ಮ, ಇಂದ್ರಿಯಗಳ ಚಲನವಲನ, ಗುಣಲಕ್ಷಣಗಳನ್ನು ಕುರಿತು ಧ್ವನಿಸುತ್ತದೆ. ಇದರಲ್ಲಿ ಪ್ರಾಸವಿಲ್ಲ, ಲಯವಿದೆ. ವಿಶೇಷ ನುಡಿಗಟ್ಟುಗಳನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಕನ್ನಡದಲ್ಲೂ ಕೂಡ ಹೈಕು ಪ್ರಕಾರ ನಾಲ್ಕೈದು ದಶಕಗಳಿಂದ ರಚನೆಗೊಳ್ಳುತ್ತಾ ಬಂದಿದೆ. ಮೊದಲಿಗೆ ಎ.ಕೆ. ರಾಮಾನುಜನ್, ಎಚ್.ಎಸ್. ಶಿವಪ್ರಕಾಶ, ಚಂದ್ರಕಾಂತ ಕುಸನೂರ ಅವರು ಹೈಕು ಪ್ರಕಾರವನ್ನು ಪ್ರಾಯೋಗಿಕವಾಗಿ ಪರಿಚಯಿಸಿದರು ಎಂದು ಎಚ್.ಟಿ. ಪೋತೆ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books