ಒಲವೇ ವಿಸ್ಮಯ

Author : ಪರಿಮಳಾ ರಾವ್ ಜಿ.ಆರ್

Pages 200

₹ 100.00




Year of Publication: 2010
Published by: ಇಂದಿರಾ ಪ್ರಕಾಶನ
Address: #972-ಸಿ, 4ನೇ ’ಇ’ ವಿಭಾಗ, 10-`ಎ’ ಮುಖ್ಯ ರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 23313400

Synopsys

ಜಿ. ಆರ್. ಪರಿಮಳಾರಾವ್ ಅವರ ‘ಒಲವೇ ವಿಸ್ಮಯ’ ಕೃತಿಯು ವಿಶೇಷ ಕಥೆಗಳಾಗಿವೆ. ಒಲವೇ ವಿಸ್ಮಯದಲ್ಲಿ ಸೃಜನಶೀಲತೆಯ ಸಣ್ಣ ಕತೆಗಳನ್ನು ಮನೋಜ್ಞವಾಗಿ ಹೆಣೆದಿದ್ದಾರೆ. ವಿಶೇಷಸುದ್ದಿಯ ವಿಚಿತ್ರ ಕತೆಗಳು ಒಂದು ಹೊಸ ಪ್ರಯೋಗವೆಂದೇ ಹೇಳಬಹುದು. ಒಂದು ದಿನದ ಸುದ್ದಿಯಾಗಿ ಮಿಂಚಿ ಮಾಯವಾಗುವ ಬದಲು ಅದನ್ನು ವಿಶೇಷ ಕಥೆಯಾಗಿಸುವ ಇವರ ಕಥಾ ಕೌಶಲ್ಯದ ಕೈಚಳಕ ಒಂದು ಹೊಸ ಪ್ರಯೋಗವೆಂದೇ ಹೇಳಬಹುದು. ಒಂದು ದಿನದ ಸುದ್ದಿಯಾಗಿ ಮಿಂಚಿ ಮಾಯವಾಗುವ ಬದಲು ಅದನ್ನು ವಿಶೇಷ ಕಥೆಯಾಗಿಸುವ ಇವರ ಕಥಾ ಕೌಶಲದ ಕೈಚಳಕ ಒಂದು ನವ್ಯ ಪ್ರಯೋಗವಾಗಿ ಜನಮನವನ್ನು ಸ್ಪಂದಿಸುವುದರಲ್ಲಿ ಸಂದೇಹವಿಲ್ಲ. ಪ್ರಪಂದ ಅನೇಕ ಸ್ಥಳಗಳಿಗೆ ಪರ್ಯಟನೆ ಮಾಡಿ ಅಮೆರಿಕ, ಇಂಗ್ಲೆಡಿನಲ್ಲಿ ವಾಸಮಾಡಿರುವ ಇವರ ಅನುಭವ ಜನ್ಯ ಪರಿಪಕ್ವತೆಯಲ್ಲಿ ಮೂಡಿರುವ ಈ ಕಥೆಗಳು ಯಶಸ್ವಿಯಾಗುವದರಲ್ಲಿ ಸಂದೇಹವಿಲ್ಲ. ಕೃತಿಯ ಕುರಿತು ಲೇಖಕಿ ಜಿ. ಆರ್. ಪರಿಮಳಾರಾವ್ ಅವರು, ಈ ಕತೆಗಳು ಎರಡು ರೀತಿಯವು. ಒಂದು ನಾನು ಜೀವನದ ಬಾಳಿನ ತೆರೆದ ಬಾಗಿಲಿನಿಂದ ವೀಕ್ಷಿಸುವಾಗ ನಾ ಕಂಡ ಒಳಸುಳಿವುಗಳು, ನನ್ನ ಚಿಂತೆನಶೀಲತೆಗೆ ಪ್ರೇರಕವಾದವು . ಹೃದಯದ ಭಾವ ಪ್ರಕ್ರಿಯೆ ಪಕ್ವಗೊಂಡು ಮಾನವತೆಯ ಬಾಗಿಲನ್ನು ತೆರೆಯಲು ಸೃಜನಶೀಲತೆಯಲ್ಲಿ ಕಲಾತ್ಮಕವಾದ ನನ್ನ ಕತೆಗಳು ಲೇಖನಿಯಿಂದ ಹುಟ್ಟಿಬಂದವು. ಪ್ರೀತಿ, ಪ್ರೇಮದಂತಹ ಪರಿಚಿತ ವಸ್ತುವಿನಿಂದ ಹಿಡಿದು, ಕೌಟುಂಬಿಕ, ಸಾಮಾಜಿಕ ಅನುಭಗಳ ವಿಭಿನ್ನ ರೀತಿಯ ಚೌಕಟ್ಟಿನಲ್ಲಿ, ನೆಳಲು- ಬೆಳಕಿನ ಆಟದಲ್ಲಿ ವಿಭಿನ್ನ ವಸ್ತು, ವಿಭಿನ್ನ ತಂತ್ರ, ವಿಭಿನ್ನ ದೃಷ್ಟಿಕೋಣದ ಕಥೆಗಳು ಹುಟ್ಟಿಕೊಂಡವು. ಇವು ನನ್ನ ಕಲ್ಪನೆಯ ಮೂಸೆಯಲ್ಲಿ ಬೆಳೆದು ಭಾಷೆ ಭಾವದ, ಆಚಾರ-ವಿಚಾರದ ಬೆಡಗಿನ ಸಮತೋಲನದಲ್ಲಿ ಸೃಷ್ಟಿಯಾದ ಬಾಳಿನಲ್ಲಿ ಕಾಬಹುದಾದ ಕತೆಗಳು ಇವುಗಳಾಗಿವೆ ಎಂದಿದ್ದಾರೆ.

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books