ಅಮೃತ ಬಳ್ಳಿ ಮತ್ತು ಇತರ ಕಥೆಗಳು

Author : ಕಂ.ಕ. ಮೂರ್ತಿ

Pages 158

₹ 190.00
Year of Publication: 2022
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

ಲೇಖಕ ಕಂ.ಕ. ಮೂರ್ತಿ ಅವರ ಕಥಾ ಸಂಕಲನ ಕೃತಿ ʻಅಮೃತ ಬಳ್ಳಿ ಮತ್ತು ಇತರ ಕಥೆಗಳುʼ. ಇದು ಹದಿನೈದು ಕತೆಗಳ ಸಂಗ್ರಹವಾಗಿದ್ದು, ಒಂದಕ್ಕಿಂತ ಒಂದು ಭಿನ್ನವಾದ ಕಥಾವಸ್ತುಗಳನ್ನು ಹೊಂದಿವೆ. ಅವುಗಳು ಸಮಾಜದ ವಿವಿಧ ಸ್ತರಗಳ ಬದುಕಿನ ಚಿತ್ರಣ ನೀಡಬಲ್ಲವು. ಇಲ್ಲಿನ ಕೆಲವು ಕತೆಗಳಲ್ಲಿ ಸ್ವತಃ ಲೇಖಕರ ಬಾಲ್ಯದ ನೆನಪಿನ ಛಾಪೂ ಇದೆ. ಲೇಖಕ ಕೇಶವ ಮಳಗಿ ಅವರು ಪುಸ್ತಕದ ಮುನ್ನುಡಿಯಲ್ಲಿ “ಇಲ್ಲಿನ ಬಹುಪಾಲು ಕಥೆಗಳ ಭಿತ್ತಿ ಮಲೆನಾಡಿನ ಸಾಮಾನ್ಯ ಜನರ ಬದುಕಿನ ಆಶೋತ್ತರ, ಕಷ್ಟಕಾರ್ಪಣ್ಯ, ಘನತೆ ತುಂಬಿದ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಮನುಷ್ಯರು ತೋರುವ ಛಲವಂತಿಕೆಗಳೇ ಆಗಿವೆ. ಅನುಭವವನ್ನು ಮರುಕಥಿಸುವಾಗ ಕಥೆಗಾರರು ತೋರುವ ಪಕ್ವ ನೋಟ ಕಥೆಗಳನ್ನು ಮೇಲುಸ್ತರಕ್ಕೇರಿಸಿವೆ. ಸಾಮಾನ್ಯರ ಜೀವನವನ್ನು ಸಂವೇದನಾಶೀಲತೆ ಮತ್ತು ಸಂಯಮಗಳಿಂದ ನಿರುಕಿಸುತ್ತ ಮೂರ್ತಿಯವರು ಕಟ್ಟುವ ಕಥೆಗಳಲ್ಲಿ ಕಥನಕೌಶಲ, ವಸ್ತುವಿಷಯ, ಶೈಲಿಗಳ ನಿರ್ವಹಣೆಯಲ್ಲಿ ತೋರುವ ನಿಪುಣತೆ ಓದನ್ನು ಹೃದ್ಯವಾಗಿಸುತ್ತವೆ. ಇಲ್ಲಿ ಬಳಸಿರುವ ಮಾದರಿ ಜನಪ್ರಿಯ ಸಾಹಿತ್ಯಕ್ಕೆ ಹತ್ತಿರವಾಗಿರುವುದರಿಂದ ಓದುಗ ಹೆಚ್ಚು ಪರಿಶ್ರಮ ಪಡದೆ ತನ್ನದನ್ನಾಗಿಸಿಕೊಳ್ಳಬಲ್ಲ. ಇಲ್ಲಿನ ಕೆಲವು ಕಥೆಗಳಲ್ಲಿ ದೊಡ್ಡವರ ಪಡಿಪಾಟಲಿನ ಬದುಕನ್ನು ಸಾಕ್ಷಿಪ್ರಜ್ಞೆಯಾಗಿ ಗ್ರಹಿಸುವ ಚಿಕ್ಕಮಕ್ಕಳ ಪಾತ್ರಗಳಿವೆ. ಅಂತೆಯೇ, ನಿಸ್ವಾರ್ಥದ, ಅಸಹಾಯಕ ಬದುಕನ್ನು ನಡೆಸುವ ಹೆಂಗಸರು ಒಂದು ಗಳಿಗೆಯಲ್ಲಿ ತೋರುವ ದಿಟ್ಟತನ ಮತ್ತು ತ್ಯಾಗಮಯ ಪಾತ್ರಗಳಿವೆ. ಇವೆಲ್ಲ ಇಂದಿಗೂ ಗ್ರಾಮಭಾರತದ ಬದುಕಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಓದುಗ ಅವುಗಳೊಂದಿಗೆ ತಾದ್ಯಾತ್ಮತೆಯನ್ನು ಸಾಧಿಸಬಲ್ಲ” ಎಂದು ಹೇಳಿದ್ದಾರೆ.

About the Author

ಕಂ.ಕ. ಮೂರ್ತಿ

ಕಂ.ಕ ಮೂರ್ತಿ ಅವರು ಪತ್ರಕರ್ತರು. ಗ್ರಾಮೀಣ ಪತ್ರಿಕಾವೃತ್ತಿಯ ಮೂಲಕ ವ್ಯವಸಾಯ ಆರಂಭಿಸಿದರು. 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 24 ವರ್ಷಗಳಿಂದ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ರಾಜಕೀಯ ವರದಿಗಾರರು. ಹಾಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸರ್ಕಾರಿ ನಾಮನಿರ್ದೇಶನ ಸದಸ್ಯರಾಗಿದ್ದು, ಹಲವು ಪತ್ರಿಕಾ ಸಂಘಟನೆಗಳಲ್ಲೂ ಕೆಲಸ ಮಾಡಿದ್ದಾರೆ. ಅನೇಕ ಕತೆಗಳು ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ನವೋದಯ ಪ್ರಶಸ್ತಿ-ಪುರಸ್ಕಾರಗಳು : ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ‘ಎಚ್. ಎಸ್ ದೊರೆಸ್ವಾಮಿ ವಾರ್ಷಿಕ ಪ್ರಶಸ್ತಿ. ...

READ MORE

Related Books