ದುಡುಕಿದ ಜೀವ

Author : ಸ್ಟ್ಯಾನಿ ಲೋಪಿಸ್, ಕಾರ್ಗಲ್

Pages 76

₹ 65.00
Year of Publication: 2012
Published by: ಅಮ್ಮ ಪ್ರಕಾಶನ
Address: ಸ್ಟ್ಯಾನಿ ಲೋಪಿಸ್ ಕಾರ್ಗಲ್,ರಷ್ಯನ್ ಕಾಲೋನಿ,ನಿತ್ಯಾಧಾರ ಮಾತೆ ಚರ್ಚ್ ಪಕ್ಕ ಕಾರ್ಗಲ್ -577421ಸಾಗರ (ತಾ), ಶಿವಮೊಗ್ಗ (ಜಿ)
Phone: +919449180184

Synopsys

ದುಡುಕಿದ ಜೀವ -ಕಥಾಸಂಕಲನವು 10 ಕಥೆಗಳನ್ನು ಒಳಗೊಂಡಿದೆ. ಲೇಖಕ ಸ್ಟ್ಯಾನಿ ಲೋಪಿಸ್ ಕಾರ್ಗಲ್ ಅವರ ಮೊದಲ ಕಥಾ ಸಂಕಲನ. ವಸ್ತು ವೈವಿಧ್ಯತೆ, ನಿರೂಪಣೆ, ಶೈಲಿ, ತಂತ್ರದಿಂದ ಗಮನ ಸೆಳೆಯುತ್ತವೆ.  

ಸಾಹಿತಿ ಡಾ. ನಾ.ಡಿ’ಸೋಜ ಅವರ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಕಥಾ ಸಂಕಲನದ ಎಲ್ಲಾ ಕಥೆಗಳನ್ನು ಓದಿದೆ.ಕವನ ಸಂಕಲನವನ್ನು ಹೊರತಂದು ಅಲ್ಪ ಸಮಯದಲ್ಲಿಯೇ ಒಂದು ಕಥಾಸಂಕಲನ ಸಿದ್ಧಪಡಿಸಿರುವೆ. ನಿನ್ನ ಬರವಣಿಗೆಯ ಉತ್ಸಾಹ ಮೆಚ್ಚಬೇಕಾದ್ದೆ. ಈ ಕಥಾ ಸಂಕಲನದಲ್ಲಿ 'ಕುರೂಪಿಯ ಮಗ' , 'ಸುಲೋಚನ' ಮೊದಲಾದ ಕಥೆಗಳು ಚೆನ್ನಾಗಿದೆ. ಕಥೆಗಳನ್ನು ಬರೆಯುವುದನ್ನು ಮುಂದುವರೆಸು’ ಎಂದು ಹಾರೈಸಿದ್ದಾರೆ. 

 

About the Author

ಸ್ಟ್ಯಾನಿ ಲೋಪಿಸ್, ಕಾರ್ಗಲ್
(11 January 1990)

ಸ್ಟ್ಯಾನಿ ಲೋಪಿಸ್ ಕಾರ್ಗಲ್- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ 11-01-1990ರಲ್ಲಿ ಜನಿಸಿದರು. ತಂದೆ ಜೋಸೆಫ್ ಲೋಪಿಸ್, ತಾಯಿ ಸೌರೀನ್ ಲೋಪಿಸ್. ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಗಲ್ ನಲ್ಲಿ, ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿದರು. ಎಂ.ಎ ಹಾಗೂ ಬಿಇಡಿ ಪದವೀಧರರು. ಸಾಗರದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ.  ರಾಜ್ಯ ಮಟ್ಟದ ಯುವಜನ ಮೇಳ ಏಕಪಾತ್ರಾಭಿನಯದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಹಲವು ಕಥೆ,ಕವನ, ನಾಟಕಗಳನ್ನು ಬರೆದಿದ್ದಾರೆ. ಅನೇಕ ಕಥೆಗಳು ಭದ್ರಾವತಿ  ಆಕಾಶವಾಣಿಯಿಂದ ಪ್ರಸಾರವಾಗಿದೆ.'ಮನದ ಕೂಗು' ಕವನ ಸಂಕಲನ , 'ದುಡುಕಿದ ಜೀವ' ಕಥಾಸಂಕಲನ. 'ಹಾಡು-ಪಾಡು' ಸಾಮಾಜಿಕ ಭಾವಗೀತೆಗಳ ಧ್ವನಿಸುರುಳಿಯೂ ಬಿಡುಗಡೆಯಾಗಿದೆ. ' ...

READ MORE

Related Books