ಮಲೆನಾಡಿನ ರೋಚಕ ಕತೆಗಳು

Author : ಗಿರಿಮನೆ ಶ್ಯಾಮರಾವ್

Pages 184

₹ 130.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಮಲೆನಾಡು ಸುಂದರ, ರಮಣೀಯ. ಅಲ್ಲಿನ ಪ್ರತಿ ಕಥೆಗಳು, ಅಲ್ಲಿನ ಜನರ ದಿನಚರಿ. ಕಥೆಗಳು ಎಲ್ಲವೂ ರೋಮಾಂಚಕ. ಮಲೆನಾಡ ಜನರಿಗೆ ಆ ದುರ್ಗಮ ಕಾಡುಗಳ ಪ್ರತಿಯೊಂದು ಪ್ರಾಣಿ¬- ಪಕ್ಷಿ, ಗುಡ್ಡ ಬೆಟ್ಟ, ಎಲ್ಲದರೊಟ್ಟಿಗು ವಿನೂತನವಾದ ಒಡನಾಟವಿರುತ್ತದೆ. ಆದರೆ ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನವೆಂಬುದು ಅತ್ಯಂತ ವೇಗವಾಗಿ ಚಿಗುರೊಡೆದು ದಿಕ್ಕಾಪಾಲಾಗಿ ಜನರ ಮನಸ್ಸನ್ನು ಆವರಿಸಿಕೊಂಡಿದೆ. ಹೀಗಾಗಿ ಇಂದಿನ ಮಕ್ಕಳಿಗೆ ಮಲೆನಾಡು ಎಂದರೇನು, ಅಲ್ಲಿನ ಬದುಕು ಹೇಗಿರುತ್ತದೆ, ಎಂಬುದರ ಪರಿಕಲ್ಪನೆಯು ಇಲ್ಲ. ಹೀಗಾಗಿ ಗಿರಿಮನೆ ಶ್ಯಾಮರಾವ್ ತಮ್ಮಮತಹ ಮಧ್ಯವಯಸ್ಕರನ್ನು ಹಿಂದಿನ ಶತಮಾನ ಹಗೂ ಪ್ರಸ್ತುತದ ಕಂಪ್ಯೂಟರ್ ಜಮಾನದ ಕೊಂಡಿ ಎಂದು ಬಣ್ಣಿಸಿದ್ದಾರೆ. ಆದ್ದರಿಂದ ಮಲೆನಡಿನ ರೋಚಕ ಕಥೆಗಳು ಕೃತಿಯಲ್ಲಿ ಮಲೆನಾಡಿನ ದಟ್ಟ ಮಳೆ, ದಟ್ಟ ಮಂಜು, ದಟ್ಟ ಏಕಾಂತ, ಏಕತಾನತೆ, ನಿಸರ್ಗದ ಸೊಬಗು ಅವುಗಳ ಸುತ್ತಾ ಹೆಣೆದುಕೊಂಡಿರು ರೊಚಕ ವಿಸ್ಮಯತೆಗಳು, ಅಜ್ಜ ಹೇಳುವ ರೋಚಕ ಕಾಡಿನ ಕಥೆಗಳು ಎಲ್ಲವನ್ನೂ ಇಂದಿನ ಪೀಳಿಗೆಗೆ ಪರಿಚಯಿಸುವ ವಿನೂತನ ಪ್ರಯತ್ನ ಮಡಿದ್ದಾರೆ. ಮೂಲತಃ ಮಲೆನಡಿನವರಾದರು ಆಧುನಿಕತೆ ಹಾಗೂ ನಗರೀಕರಣದ ಅಮಲೇರಿದಂತಹ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಹೀಗಾಗಿ ಅವರ ಮಕ್ಕಳು ತಮ್ಮ ಊರಿನ ಅನುಭವವೇ ಇಲ್ಲದೆ ಬೆಳೆಯುತ್ತರೆ. ಪರಿಣಾಮವಗಿ ನಗರಗಳು ಕಿಷ್ಕಿಂದವಾಗುತ್ತದೆ ಅಲ್ಲದೆ ಮಕ್ಕಳಿಗೆ ಮಲೆನಾಡಲ್ಲಿ ಧೋ ಎಂದು ಸುರಿಯುವ ಮಳೆ, ಅದರಲ್ಲಿ ಒದ್ದೆಯಾಗಿ ಶಾಲೆಗೆ ಹೋಗುವುದು, ಮೈ ಶಾಖಕ್ಕೆ ಬಟ್ಟೆ ಒಣಗಿಸಿಕೊಳ್ಳುವುದು, ಕೆಸರಿನಲ್ಲಿ ಗೆಳೆಯರೊಂದಿಗೆ ಆಟವಾಡುವುದು, ಆ ದುರ್ಗಮ ಕಾಡು ದಾರಿಗಳಲ್ಲಿ ಏನೇನೋ ವಿಸ್ಮಯಗಳನ್ನು ಎದುರಿಸುವುದು ಈ ಯಾವು ತಿಳಿದಿರುವುದಿಲ್ಲ. ಆದ್ದರಿಂದ ಈ ಕೃತಿಯಲ್ಲಿ ಲೇಕಕರು ಮಲೆನಾಡಿನ ರೋಚಕ ಬದುಕು ಹಾಗೂ ನಗರೀಕರಣದ ಸಮಸ್ಯೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಹೀಗಾಗಿ ಕನ್ನಡ ಸಾಹಿತ್ಯದ ಈಚಿನ ಚರಿತ್ರೆಗಳಲ್ಲಿ ‘ಮಲೆನಾಡಿನ ರೋಚಕ ಕಥೆಗಳ’ನ್ನು ಗಮನಾರ್ಹ ಪ್ರಯೋಗವೆಂದೇ ಹೇಳಬಹುದು.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books