ಮ್ಯೂಟೇಶನ್

Author : ಎಸ್.ಎಫ್‌. ಯೋಗಪ್ಪನವರ

Pages 88

₹ 70.00
Year of Publication: 2017
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀಭವನ, ಸುಭಾಸ ರಸ್ತೆ, ಧಾರವಾಡ-1
Phone: 0836-2441822/9845447007

Synopsys

’ಆರಾಮಕುರ್ಚಿ ಮತ್ತು ಇತರ ಕತೆಗಳು’ ಕಥಾ ಸಂಕಲನವನ್ನು ಪ್ರಕಟಿಸಿದ ಬಹುಕಾಲದ ನಂತರ ಎಸ್‌. ಎಫ್‌ ಯೋಗಪ್ಪನವರ ಬರೆದ ಕತೆಗಳ ಗುಚ್ಛ ’ಮ್ಯೂಟೇಶನ್’. ಇದು ಅವರ ಎರಡನೇ ಕಥಾಸಂಕಲನ. 

ಕೃತಿ ಕುರಿತು ಕತೆಗಾರರ ಪ್ರಸ್ತಾಪಿಸುತ್ತಾ ’ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ, ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ’ ಎಂದಿದ್ದಾರೆ. 

About the Author

ಎಸ್.ಎಫ್‌. ಯೋಗಪ್ಪನವರ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್ ಕೆ.ಎ.ಎಸ್. ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ', 'ಪ್ರೀತಿ ಎಂಬುದು ಚಂದ್ರನ ದಯೆ', 'ಶೋಧ' ಎಂಬ ಕಾದಂಬರಿಗಳನ್ನು, 'ಆರಾಮ ಕುರ್ಚಿ ಮತ್ತು ಇತರ ಕತೆಗಳು', 'ಮೂಟೇಶನ್' ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 'ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು', ಜೆ.ಡಿ. ಸಾಲಿಂಜರ್‌ನ ಕಾದಂಬರಿ 'ಹದಿಹರೆಯದ ಒಬ್ಬಂಟಿ ಪಯಣ' ಅವರ ಅನುವಾದಿತ ಪುಸ್ತಕಗಳು. ...

READ MORE

Related Books