ಪ್ರವೃತ್ತಿಯಿಂದ ಬರಹಗಾರರಾದ ಕರ್ಕಿ ಕೃಷ್ಣಮೂರ್ತಿ ಅವರ ಸಣ್ಣ ಕತೆಗಳ ಸಂಗ್ರಹ ’ಗಾಳಿಗೆ ಮೆತ್ತಿದ ಬಣ್ಣ’.
ಈ ಕೃತಿಯ ನಿರೂಪಣೆಯಲ್ಲಿ ಕಥೆಗಾರ ಕಥೆಯನ್ನು ಹೇಳುತ್ತಾ ಓದುಗರು ಅದನ್ನು ಓದುತ್ತಾ ಸಾಗುವ ಲಯಗಾರಿಕೆಯನ್ನು ಕಾಣಬಹುದು. ಕತೆಗಾರರು ಹೇಳಿದ ಕತೆಯನ್ನು ಪ್ಯಾಸಿವ್ ಆಗಿ ಗ್ರಹಿಸುವ ಗ್ರಾಹಕರು ಒಂದೆಡೆಯಾದರೆ ನಿರೂಪಿಸುತ್ತಿರುವ ಕಥೆಗಾರರು ಮತ್ತೊಂದೆಡೆ ನಿಲ್ಲುತ್ತಾರೆ. ಇವರಿಬ್ಬರ ನಡುವಿನ ಸಂವಹನ ತಂತ್ರದ ಕಥನ ಶೈಲಿ ಈ ಕೃತಿಯಲ್ಲಿ ವಿಶೇಷವಾಗಿದೆ.