ಅರ್ಧಸತ್ಯ

Author : ಮಾಕೋನಹಳ್ಳಿ ವಿನಯ್ ಮಾಧವ್

Pages 156

₹ 150.00
Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

ಮಾಕೋನಹಳ್ಳಿ ವಿನಯ್ ಮಾಧವ್ ಅವರ ‘ಅರ್ಧಸತ್ಯ’ ಕೃತಿಯು ಅಪರಾಧ ಕತಾನಕಗಳಾಗಿವೆ. ಲೇಖಕ ಇಲ್ಲಿ ಅಪರಾಧದ ಇಂದಿನ ನಗ್ನ ಸತ್ಯಗಳನ್ನು ಹೊರಹಾಕುವಂತಹ ವಿಚಾರಗಳನ್ನು ಇಲ್ಲಿನ ಲೇಖನಗಳಲ್ಲಿ ವಿಶ್ಮೇಷಿಸಿದ್ದಾರೆ. ಲೇಖಕ ಬೆನ್ನುಡಿಯಲ್ಲಿ, ಹೌದು ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗ್ತಿನಿ. ಯಾವ ಅಪರಾಧ ಸುದ್ದಿಯೂ ನನ್ನ ಕಣ್ಣಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್‌ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ನನಗೆ ಬೇಕಾದ ಸುದ್ದಿ ಹೊರ ತರಬಲ್ಲೆ, ಅಂಡರ್‌ವರ್ಲ್ಡ್ ಡಾನ್ ಎಂದು ಎನ್ನಿಸಿಕೊಂಡವರು ಸಹ ನನಗೇನೂ ದೂರವಲ್ಲ. ಆದರೆ, ಯಾವಾಗ ಬೇಕಾದರೂ, ಯಾರ ವಿರುದ್ಧ ಕೂಡ ತಿರುಗಿ ಬೀಳಬಲ್ಲೆ. ನನ್ನ ಕೈಯಲ್ಲಿ ಅಗದ ಕೆಲಸವಿಲ್ಲ ಎನ್ನುವ ಹದ್ದು ಬೇರೆ. ಯಾರ ಹಂಗಿನಲ್ಲೂ ನಾನಿಲ್ಲ ಎನ್ನುವ ಮರಹಂಕಾರ. ಆದರೆ, ತಾನು ಯಾವ ವೇಶ್ಯಾವಾಟಿಕೆ, ಡ್ರಗ್‌ಗಳ ವಿರುದ್ಧ ಪಟಗಟ್ಟಲೆ ಬರೆದಿದ್ದನೋ, ಆದೇ ಆ ವೃತ್ತದೊಳಗೆ ಸ್ನೇಹಿತರ ಜೊತೆ ಪರೋಕ್ಷವಾಗಿ ಭಾಗಿಯಾದಾಗ? ತನಗೆ ಸುದ್ದಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಕೆಲವು ಅಧಿಕಾರಿಗಳನ್ನು ಹೀರೋಗಳಂತೆ ಪ್ರತಿಬಿಂಬಿಸಿ, ಕೊನೆಗೆ ಸತ್ಯ ತಿಳಿದಾಗ? ಇಷ್ಟೆಲ್ಲಾ ಅಧಿಕಾರದಲ್ಲಿರುವವರ ಸಂಪರ್ಕವಿದ್ದರೂ, ನಿಜವಾಗಿ ನೊಂದವರಿಗೆ ಸಾಂತನ ಹೇಳಲೂ ಆಗದಿದಾಗ? ಇದೆಲ್ಲಾ ಇರಲಿ... ಇಡೀ ವ್ಯವಸ್ಥೆಯೇ ತನ್ನನ್ನು ಹೀರೋ ಎಂದು ಹೊಗಳುತ್ತಾ, ತಮಗೆ ಬೇಕಾದಂತೆ ಕಥೆಗಳನ್ನು ಕಟ್ಟುತ್ತಾ ಹೋದಾಗ? ತನ್ನನ್ನು ಟಾಯ್ಲೆಟ್‌ನಲ್ಲಿ ಟಿಶೂ ಪೇಪರ್‌ನಂತೆ ಉಪಯೋಗಿಸಿ ಎಸೆದಂತ ಅನುಭವವಾಗುತ್ತದೆ. ಆಗ ಸಾಮಾನ್ಯ ಮನುಷ್ಯನಂತೆ ಯೋಚಿಸಲು ಆರಂಭಿಸುತ್ತೇನೆ. ಆದರೂ, ಪ್ರಪಂಚದ ಮಟ್ಟಿಗೆ ನಾನೊಬ್ಬ ಸೆಲೆಬ್ರಿಟಿ ಕ್ರೈಂ ರಿಪೋರ್ಟರ್ ಎಂದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಅರ್ಧ ಸತ್ಯ, ಪ್ರಮೋಶನ್‌, ಪರೀಕ್ಷೆ, ಕನಿಷ್ಠ ಬಿಲ್ಲೆ, ಅತ್ಯಾಚಾರದ ಸುಳಿ, ನಕ್ಷತ್ರಗಳು ಹೀಗೆ ಒಟ್ಟು ಆರು ಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ.  

About the Author

ಮಾಕೋನಹಳ್ಳಿ ವಿನಯ್ ಮಾಧವ್

ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. 1996ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. 25 ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ. ...

READ MORE

Related Books