ಬಂದೀತು ಆ ದಿನ

Author : ನಳಿನಿ ಮೈಯ

Pages 136

₹ 100.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಅಮೆರಿಕದ ಕನ್ನಡ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ನಳಿನಿ ಮೈಯರವರ ಅನುಭವಗಳು ಮತ್ತು ಚಿಂತನೆಗಳ ವೈವಿಧ್ಯಮಯ ಬರಹಗಳ ಸಂಕಲನ ’ಬಂದೀತು ಆ ದಿನ’. ಈ ಪುಸ್ತಕದಲ್ಲಿರುವ 25 ಬರಹಗಳ ಶೈಲಿಯೂ ವೈವಿಧ್ಯಮಯವಾಗಿದೆ.  ಬಿಳಿಯ, ಕರಿಯ ಎಂಬ ತಾರತಮ್ಮ ತಪ್ಪು ಎಂಬ ಭಾವನೆ ಬೇರೂರಿದಂತೆ ಮುಂದೆ ಎಂದಾದರೂ ಗಂಡು, ಹೆಣ್ಣು ಎಂಬ ತಾರತಮ್ಯವೂ ತಪ್ಪು ಎಂದು ತಿಳಿಯುವ ಆಶಯದ ಸಾಲು ’ಬಂದೀತು ಆ ದಿನ’ ಪ್ರಬಂಧದ ರಚನೆಯಾಗಿದೆ.

ನಳಿನಿಯವರು ಆಕ್ಯುಪೇಷನಲ್ ಆದ ಕತೆ, ಮತ್ತು ಆ ವೃತ್ತಿಯ ಅನುಭವಗಳು ಇವರ ಪ್ರಬಂಧಗಳಲ್ಲಿ ವ್ಯಕ್ತವಾಗಿದೆ. ಹಲವಾರು ಅನುಭವಗಳ ಮೂಲಕ ಮಾನವ ಸಂಬಂಧದ ಒಳನೋಟಗಳನ್ನು, ಮುಖವಾಡದ ಬದುಕಿನ ನಗ್ನ ಸತ್ಯಗಳನ್ನು ಲೇಖನದಲ್ಲಿ ಪರಿಚಯಿಸಿದ್ದಾರೆ.  ಪ್ರಬಂಧ ಸಂಕಲನದ ಬಹುತೇಕ ಬರಹಗಳು ಅನುಭವ ಕಥನಗಳೇ ಆಗಿವೆ. ನಳಿನಿ ಮೈಯರ ಕಥನ ಕೌಶಲ ಎಷ್ಟು ಪ್ರಭಾವಶಾಲಿ ಎಂದು ತಿಳಿಯಲು ಅವರ “ಅಜ್ಜಿ ಹೇಳಿದ ಕಥೆ' ಒಂದು ಧ್ವನಿಪೂರ್ಣ ವಿವರಣೆಯಾಗಿದೆ. ವಲಸೆಗಾರರು ಬರುವ ಮುನ್ನ ದೇಶದಲ್ಲಿನ ಜನ ಎಷ್ಟು ಪ್ರಕೃತಿಪ್ರಿಯರಾಗಿದ್ದರು, ಹೃದಯವಂತರಾಗಿದ್ದರು ಎಂಬುದನ್ನು ನಳಿನಿ ಮನೋಜ್ಞವಾಗಿ ನಿರೂಪಿಸಿದ್ದಾರೆ.

ಸಾಹಿತಿ ಅ. ರಾ. ಮಿತ್ರ ಅವರು ನಳಿನಿಯವರ ’ಬಂದೀತು ಆ ದಿನ’ ಪುಸ್ತಕದ ಬಗ್ಗೆ ಅವಲೋಕಿಸಿಸುತ್ತಾ ’ಹರಟೆ ಅಥವಾ ಲಲಿತಪ್ರಬಂಧಗಳ ಜಾತಿಗೆ ಸೇರುವ ಈಕೆಯ ಬರವಣಿಗೆ ನನ್ನ ಮನಸ್ಸನ್ನು ಗೆದ್ದಿದೆ. ಎರಡು ಸಂಸ್ಕೃತಿಗಳ ಒಳನೋಟಗಳನ್ನು ಹರಡುವ ಕ್ರಿಯೆಯೇ ಅಲ್ಲದೆ ಎರಡರ ಸಮಾನತೆಗಳು, ಮನೋವೈವಿಧ್ಯಗಳು, ಸಪ್ಪೆತನ, ಗಟ್ಟಿತನ, ಇಬ್ಬಂದಿತನಗಳು ಇವನ್ನೆಲ್ಲ ತೂಕಕ್ಕಿಟ್ಟು ನಿರ್ಧರಿಸುವ ಮೌಲ್ಯಮಾಪನ ಸಾಮರ್ಥ್ಯ ಅವರ ಬರವಣಿಗೆಯಲ್ಲಿ ಢಾಳಾಗಿ ಮಿಂಚುತ್ತವೆ. ಸರಸತೆಯ ಕವಚವನ್ನು ತೊಟ್ಟು ಹೊರಡುವ ಅವರ ಬರಹಗಳು ಹೃದಯವನ್ನು ಹೋಗುವ ಸಾಮರ್ಥ್ಯದ ಜತೆಗೆ ಓದುಗರನ್ನು ಚಿಂತನೆಯ ತಕ್ಕಡಿಯಲ್ಲಿ ನಿಲ್ಲಿಸುವ ಗುಣಗಳನ್ನು ಧಾರಾಳವಾಗಿ ತೋರುತ್ತಿವೆ. ನಿಜವಾಗಿ ವಿದೇಶಿಯಾಗಿರುವ ಈ ಮಹಿಳೆ ಭಾರತೀಯ ಚಿಂತನಾ ಲಹರಿ, ಪಾಶ್ಚಾತ್ಯ ಸ್ವತಂತ್ರ ಧೋರಣೆಗಳೆರಡನ್ನೂ ತಮ್ಮ ಅಂತರಂಗದಲ್ಲಿ ಸಮನ್ವಯಿಸಿಕೊಂಡಿರುವುದು ನನಗೆ, ನಮ್ಮಂಥ ಓದುಗರಿಗೆ ಸಹಚಿಂತನ ಭಾಗಿಗಳಾಗುವ ಅವಕಾಶವನ್ನು ಧಾರಾಳವಾಗಿ ಕೊಡುತ್ತಿವೆ.’ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

 

About the Author

ನಳಿನಿ ಮೈಯ

ನಳಿನಿ ಮೈಯ ಅವರು ಡೇರಿಯನ್-ಇಲಿನಾಯ್ ನಲ್ಲಿ ಪತಿ ಸುಬ್ರಾಯ ಮೈಯ ಅವರೊಡನೆ ನೆಲೆಸಿದ್ದಾರೆ. ವೃತ್ತಿಯಲ್ಲಿ ಆಕ್ಯುಪೇಶನಲ್ ಥೆರಪಿಸ್ಟ್ ಆಗಿದ್ದವರು. ಈಗ ನಿವೃತ್ತರಾಗಿದ್ದಾರೆ. ಮರೀಚಿಕೆ ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಶಿಕಾಗೋ ನಗರದ ವಿದ್ಯಾರಣ್ಯ ಕನ್ನಡ ಕೂಟದ ಸಕ್ರಿಯ ಸದಸ್ಯೆ. ಕೂಟದ ಸಂಗಮ ಪತ್ರಿಕೆಯ ಸಂಪಾದಕಿಯಾಗಿದ್ದರು. ಕನ್ನಡ ಸಾಹಿತ್ಯ ರಂಗದ ಅನೇಕ ಪುಸ್ತಕಗಳಿಗೆ ಸಂಪಾದಕ ಸಲಹಾ ಮಂಡಳಿಯಲ್ಲಿದ್ದು ಸೇವೆ ಮಾಡಿದ್ದಾರೆ. ಬೇಂದ್ರೆ ಅಂದ್ರೆ ಪುಸ್ತಕಕ್ಕೆ ನಾಗ ಐತಾಳರ ಜೊತೆ ಸಹಸಂಪಾದಕಿಯಾಗಿದ್ದರು. ಕನ್ನಡ ಸಾಹಿತ್ಯ ರಂಗದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಕನ್ನಡ ಸಾಹಿತ್ಯ ರಂಗದ ಕಾರ್ಯಕಾರಿ ...

READ MORE

Related Books