ಏಡಿ ಶಿಕಾರಿ

Author : ಗಿರೀಶ್ ಮೂಗ್ತಿಹಳ್ಳಿ

Pages 20

₹ 60.00




Year of Publication: 2023
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಏಡಿ ಶಿಕಾರಿ’ ಗಿರೀಶ್‌ ಮೂಗ್ತಿಹಳ್ಳಿ ಅವರ ಕಥಾಸಂಕಲನವಾಗಿದೆ. ಮಕ್ಕಳಿಗೆ ಊಟಕ್ಕಿಂತ ಆಟ ಮುಖ್ಯ ಅಲ್ಲವೇ? ಪ್ರಾಣಿ-ಪಕ್ಷಿ ಮುಂತಾಗಿ ಏನೇ ಸಿಕ್ಕಿದರೂ ಆಟ ಆಡುತ್ತಾರೆ. ಮೊದಲ ಮಳೆ ಸುರಿಯುತ್ತಿದ್ದಾಗ ಅಪ್ಪನೊಂದಿಗೆ ಏಡಿಗಳ ಶಿಕಾರಿಗೆ ಹೊರಟ ಹುಡುಗನಿಗೆ ಸುತ್ತಲ ಪರಿಸರ ನೋಡಿ ಖುಷಿಯೋ ಖುಷಿ. ಅಪ್ಪ ಏಡಿಗಳನ್ನು ಹುಡುಕಿ ಹುಡುಕಿ ಸುಸ್ತಾದಾಗ, ಅಪ್ಪ ಏಡಿಯ ಗೂಡೊಳಗೆ ಕೈಹಾಕಿ ಎಳೆದು ಸಾಯಿಸಿದಾಗಮಗನಿಗೆ ಮರುಕ. ಅಪ್ಪನಿಗೆ ಏಡಿ ಅಡುಗೆ ಊಟದ ಗುಂಗು; ಮಗನಿಗೆ ಅವುಗಳೊಂದಿಗೆ ಆಟವಾಡಿದ ರಂಗು! ಪರಿಸರದ ಸೊಬಗಿನಿಂದ ಕೂಡಿದ ಕಥೆ ಬಡತನದ ಬೇಗೆಯೊಂದಿಗೆ ಹಲವು ವಿಚಾರಗಳನ್ನು ಓದುಗರಿಗೆ ತಲುಪಿಸುತ್ತದೆ.

About the Author

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ. ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ) ...

READ MORE

Related Books