ಆಯ್ದ ಸಣ್ಣ ಕತೆಗಳು

Author : ಗೀತಾ ನಾಗಭೂಷಣ

Pages 164

₹ 50.00




Year of Publication: 2003
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ

Synopsys

‘ಆಯ್ದ ಸಣ್ಣ ಕತೆಗಳು’ ಗೀತಾ ನಾಗಭೂಷಣ ಅವರ ಸಣ್ಣ ಕಥಾಸಂಕಲನವಾಗಿದೆ. ಉತ್ತಮ ಕಥೆಗಾರರೆಂದು ಚಿತ್ತಾಲ, ನಿರಂಜನ, ಅನಂತಮೂರ್ತಿ, ಕುಂವೀ ಇವರೆಲ್ಲ `ಓದುಗರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದು ಮರೆಯಲಾಗದಂಥ ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸಿದ್ದಾರೆ.

About the Author

ಗೀತಾ ನಾಗಭೂಷಣ
(25 March 1942 - 28 June 2020)

ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...

READ MORE

Reviews

ಹೊಸತು - ಎಪ್ರಿಲ್‌ -2005

ಕಳೆದ ಶತಮಾನದಲ್ಲಿ ಬದುಕಿನ ಎಲ್ಲ ಮಜಲುಗಳನ್ನು ಅನಾವರಣಗೊಳಿಸುವಂಥ ವೈವಿಧ್ಯಮಯ ಕಥಾಸಾಹಿತ್ಯವು ಸಮೃದ್ಧವಾಗಿ ವಿವಿಧ ಲೇಖಕರಿಂದ ಮೂಡಿಬಂದಿದೆ. ಉತ್ತಮ ಕಥೆಗಾರರೆಂದು ಚಿತ್ತಾಲ, ನಿರಂಜನ, ಅನಂತಮೂರ್ತಿ, ಕುಂವೀ ಇವರೆಲ್ಲ `ಓದುಗರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನ ಪಡೆದು ಮರೆಯಲಾಗದಂಥ ಭಾವನಾತ್ಮಕ ಸಂಬಂಧವನ್ನು ಸ್ಥಾಪಿಸಿದ್ದಾರೆ. ಈಗ ಒಂದು ತಲೆಮಾರಿನ ಜನಜೀವನದಲ್ಲಿ ಸಾಕಷ್ಟು ಪರಿವರ್ತನೆಯೂ ಆಗಿದೆ. ಕಥೆಗಳ ಮೂಲಕ ಕಥೆಗಾರರು ನೀಡಿದ ಮೂಲಸಂದೇಶಕ್ಕೆ ಪ್ರಗತಿಪರ ಆಶಯಕ್ಕೆ ಪರೋಕ್ಷವಾಗಿ ಸಿಕ್ಕ ಬೆಲೆಯೋ ಎಂಬಂತೆ ಅನೇಕ ಬದಲಾವಣೆಗಳಾಗಿವೆ. ಸಹಜತೆ ಮತ್ತು ವಾಸ್ತವತೆಗೆ ತೀರ ಹತ್ತಿರವಿರುವ ಕೆಲವೊಂದು ಕಥೆಗಳನ್ನು ಇಲ್ಲಿ ಓದಬಹುದು.


 

Related Books