ನನ್ನ ನಿನ್ನ ನೆಂಟತನ

Author : ಇಂದ್ರಕುಮಾರ್‌ ಎಚ್.ಬಿ

₹ 80.00
Year of Publication: 2012
Published by: ಚಿಗುರು ಪುಸ್ತಕ

Synopsys

ಲೇಖಕ ಇಂದ್ರಕುಮಾರ್‌ ಎಚ್.ಬಿ. ಅವರ ಎರಡನೇ ಕಥಾಸಂಕಲನ ಕೃತಿ ʻನನ್ನ ನಿನ್ನ ನೆಂಟತನʼ. ಪುಸ್ತಕದಲ್ಲಿ ಲೇಖಕರು ತಮ್ಮ ವೃತ್ತಿ ಮತ್ತು ಮಕ್ಕಳ ಜೊತೆಗಿನ ಅನುಸಂಧಾನದ ಅನುಭವಗಳನ್ನು ಕತೆಗಳ ರೂಪದಲ್ಲಿ ಹೇಳಿದ್ದಾರೆ. ಈ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಅವುಗಳು; ಬೇಟೆ, ಚಮತ್ಕಾರ, ಅಡ್ಡದಾರಿ, ನನ್ನ ನಿನ್ನ ನೆಂಟತನ, ಅವನೂ ಅವಳು, ಹೋಮ್‌ ಸ್ವೀಟ್‌ ಹೋಮ್‌ ಇತ್ಯಾದಿ.

About the Author

ಇಂದ್ರಕುಮಾರ್‌ ಎಚ್.ಬಿ

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’.  ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.  ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ...

READ MORE

Related Books