ಸಾಹಸದ ಕಥೆಗಳು

Author : ಕುಡ್ಪಿ ವಾಸುದೇವ ಶೆಣೈ

Pages 20

₹ 0.00




Year of Publication: 1955
Published by: ಒಂದಾಣೆ ಮಾಲೆ ಮಂಗಳೂರು

Synopsys

’ಸಾಹಸದ ಕಥೆಗಳು  ’ಎಂಬ ಪುಸ್ತಕವು ಕುಡ್ಪಿ ವಾಸುದೇವ ಶೆಣೈ ಅವರ ಕಥಾ ಪುಸ್ತಕದ ಸಂಗ್ರಹವಾಗಿದೆ. ಪ್ರತಿಯೊಂದು ದೇಶದ ಇತಿಹಾಸದಲ್ಲಿ, ಅಸಮ ಸಾಹಸ ತೋರಿದ ಬಾಲಕರ, ಬಾಲಕಿಯರ, ಮಹಿಳೆಯರ ಮತ್ತು ಪುರುಷರ ಕಥೆಗಳಿವೆ. ಕೆಲವರು ಭೂತದಯೆಯಿಂದ ಪ್ರೇರಿತರಾಗಿ, ಸಾಹಸ ಕಾರ್ಯಗಳನ್ನೆಸಗಿ ದರು. ಮತ್ತೆ ಕೆಲವರು ದೇಶ ಪ್ರೇವದಿಂದ ಪ್ರೇರಿತರಾದರು. ಇನ್ನು ಕೆಲವರು ಸ್ವಾಮಿನಿಷ್ಠೆ, ಪ್ರಾಮಾಣಿಕತೆ, ಸತ್ಯಪ್ರಿಯತೆಗಳಿಂದ ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸಿದರು. ಇಂಥ ಕಥೆಗಳಲ್ಲಿ, ಫ್ರಾನ್ಸಿಗೆ ಸಂಬಂಧಪಟ್ಟ ಎಂಟು ಕಥೆಗಳನ್ನಾರಿಸಿ ಇಲ್ಲಿ ಕೊಟ್ಟಿರುವೆವು. ಕಲ್ಪಿತ ಕಥೆಗಳಲ್ಲ; ನಿಜವಾಗಿ ನಡೆದವು. ಎಂಬುದು ಲೇಖಕರ ನಿಲುವಾಗಿದೆ.

About the Author

ಕುಡ್ಪಿ ವಾಸುದೇವ ಶೆಣೈ
(24 June 2022)

ದಕ್ಷಿಣ ಕನ್ನಡದ ಹಳೆಯ ತಲೆಮಾರಿನ ಬರಹಗಾರರಲ್ಲಿ ದಿ|ಕುಡ್ಪಿ ವಾಸುದೇವ ಶೆಣೈ ಅವರ ಕೊಡುಗೆ ಅನನ್ಯ .1907ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಕುಡ್ಪಿ ನರಸಿಂಹ ಶೆಣೈ ಹಾಗೂ ಕಲ್ಯಾಣಿ ಬಾಯಿಯವರ ಮಗನಾಗಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪಡೆದ ಅವರು, ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ನಂತರ ಉಡುಪಿಯ ಪ್ರಭಾಕರ್ ಪ್ರೆಸ್ ಹಾಗೂ ಮಂಗಳೂರಿನ ಕಂಠೀರವ ಮುದ್ರಣಾಲಯಗಳಲ್ಲಿ ಪತ್ರಿಕಾಗಾರನಾಗಿ ಕೆಲಸ ಪ್ರಾರಂಭಿಸಿ ಕಂಠೀರವ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿದ್ದರು. ಕುಡ್ಪಿಯವರು ತಮ್ಮ ಸ್ವಂತ ವಾರಪತ್ರಿಕೆ ‘ಪ್ರಭಾತ’ವನ್ನು ೧೯೩೫ರಲ್ಲಿ ಪ್ರಾರಂಭಿಸಿದರು. ಕುಡ್ಪಿಯವರು ‘ಪ್ರಭಾತ ಪ್ರಿಂಟರ್ಸ್ ಲಿಮಿಟೆಡ್’ ...

READ MORE

Related Books