ಅವ್ವ ನೀ ಸಾಯಬಾರದಿತ್ತು

Author : ಬಿ.ಜೆ. ಪಾರ್ವತಿ.ವಿ. ಸೋನಾರೆ

Pages 112

₹ 110.00
Year of Publication: 2020
Published by: ಸ್ನೇಹ ಬುಕ್ ಹೌಸ್
Address: ನಂ. 165,10 ನೇ ಮುಖ್ಯ ರಸ್ತೆ,ಶ್ರೀನಗರ,ಬೆಂಗಳೂರು- 560050,
Phone: 9845031335

Synopsys

ವಿಭಿನ್ನ ಸಂದೇಶಗಳನ್ನು ಸಾರುವ ಕಥಾಸಂಕಲನ "ಅವ್ವ ನೀ ಸಾಯಬಾರದಿತ್ತು" ಈ ಸಂಕಲನದಲ್ಲಿಯ " ಗುಜ್ಜೆವ್ವನ ಗುಡಿಸಲೊಳಗ" ಎನ್ನುವ ಕಥೆಯು 2021ರಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿಎ 3ನೇ ಸೆಮೆಸ್ಟರಿಗೆ ಪಠ್ಯವಾಗಿದೆ. ಹೆಂಡತಿಯನ್ನು ಕಳೆದುಕೊಂಡ ಕಥಾ ನಾಯಕ ತನ್ನ ಜೀವನದುದ್ದಕ್ಕೂ ಮರು ಮದುವೆಯಾಗದೆ ತಾನೆ ತಾಯಿಯಾಗಿ ತಂದೆಯಾಗಿ ಮಕ್ಕಳನ್ನು ಸಾಕಿದವನಿಗೆ ಸಿಗುವ ನೋವು ಅಪಮಾನ ಎಂಥವರ ಮನಸ್ಸನ್ನೂ ಕಲಕುತ್ತದೆ . ಈ ಕಥಾ ಸಂಕಲನದಲ್ಲಿ ಬರುವ ಎಲ್ಲಾ ಕಥೆಗಳ ವಿಷಯ ವಸ್ತುಗಳು ಓದುಗನನ್ನು ಹಿಡಿದಿಡುತ್ತವೆ. ತಂದೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳು, ತನ್ನ ಗಂಡನ ಮುಂದೆ ಅಸಹಾಯಕಳಾಗಿ ಪರದಾಡುವ ಪರಿಸ್ಥಿತಿಯನ್ನು ಒಂದು ಕಥೆ ಹೇಳಿದರೆ, ಮತ್ತೊಂದರಲ್ಲಿ ಕುಡುಕ ತಂದೆಯ ಕಿರುಕುಳದಿಂದಾಗಿ ತಾಯಿಯನ್ನು ಕಳೆದುಕೊಂಡು, ಕಷ್ಟಗಳ ಸರಮಾಲೆಯನ್ನೇ ಹಾಕಿಕೊಂಡು , ಕ್ರೂರ ಸಮಾಜದ ಕಪಿಮುಷ್ಠಿಯಲ್ಲಿ ನರಳುವ ಮಕ್ಕಳ ಪರಿಸ್ಥಿತಿಯನ್ನು ಮನಃ ಕಲಕುವಂತೆ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಹೆಣ್ಣಿನ ತಲ್ಲಣ , ದುಃಖ ದುಮ್ಮಾನಗಳು ತುಂಬಾ ಚೆನ್ನಾಗಿ ಅನಾವರಣಗೊಂಡಿವೆ. ಪ್ರೀತಿಸಿ ಮದುವೆಯಾದರೂ ವ್ಯವಸ್ಥೆಯ ವಿರುದ್ಧ ನಿಲ್ಲಲಾಗದೇ ಮರುಮದುವೆಯಾಗುವ ಗಂಡಸು, ಬಲಿಪಶುವಾಗುವ ಹೆಣ್ಣಿನ ಬವಣೆಗಳು , ತಾಯಿ ಇಲ್ಲದ ತಬ್ಬಲಿಗಳ ಸಂಕಟಗಳು , ಮಕ್ಕಳನ್ನೇ ಮಾರಲು ಹೊರಟ ತಂದೆ , ಹೊಟ್ಟೆಗನ್ನವೂ ಕೊಡದೇ ಮನೆಯಿಂದ ಹೊರಹಾಕಿದ ಮಲತಾಯಿಯನ್ನು ಕೊನೆಯ ದಿನಗಳಲ್ಲಿ ಮಗುವಿನಂತೆ ಆರೈಕೆ ಮಾಡಿದ ಹುಚ್ಚಮಂಜ್ಯಾ, ಹೀಗೆ ಸಿಟ್ಟು, ಸೆಡವು , ಸಂಕಟ ಮತ್ತು ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಕಥೆಗಾರ್ತಿ. 

About the Author

ಬಿ.ಜೆ. ಪಾರ್ವತಿ.ವಿ. ಸೋನಾರೆ

ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ  ಇವರು  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ.  ವಿಜಯ ಕುಮಾರ ಸೋನಾರೆಯವರ ಕೈಹಿಡಿದು  ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ.  ಇವರು ಅನೇಕ  ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.   ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್‌ ಫೇತ್‌” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ...

READ MORE

Related Books