ಭೂತದ ಕೋಳಿ

Author : ಅನು ಬೆಳ್ಳೆ (ರಾಘವೇಂದ್ರರಾವ)Published by: ವಿಸ್ಮಯ ಪ್ರಕಾಶನ
Address: "ಮೌನ " ೩೬೬, ನವಿಲು ರಸ್ತೆ, ಎ -ಬಿ ಬ್ಲಾಕ್, ಕುವೆಂಪು ನಗರ, ಮೈಸೂರು -೫೭೦೦೨೩.

Synopsys

ಅನು ಬೆಳ್ಳೆ(ಬಿ. ರಾಘವೇಂದ್ರ ರಾವ್ ) ಅವರ ಕತಾಸಂಕಲನ ಭೂತದ ಕೋಳಿ. ನನ್ನ ಕತೆ ಸ್ವಲ್ಪ ಕೇಳಿ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದ್ದು, ಒಟ್ಟು 12 ಕಥೆಗಳಿವೆ. ಗೋಲಿ ಸೋಡಾ, ಶಾಪ,ಭೂತದ ಕೋಳಿ, ಪಾತಕ್ಕ ಮತ್ತು ಮಂಡೆಕಾಗೆ,ಹಳದಿಗೋಡೆ ಮತ್ತು ಅವನು,ಹೀಗೇ ಇನ್ನೂ ಸಾಹಸಿ, ಐಸ್ಕ್ಯಾಂಡಿ, ಸೆಕೆಂಡ್ ಹ್ಯಾಂಡ್, ಡೋಲು, ಒಂದು ದಳ ಶ್ರೀತುಳಸಿ, ಋಣ ಅನ್ನುವ ಕಥೆಗಳಿವೆ. ಪ್ರತಿಯೊಂದು ಕಥೆಯೂ ವಿಭಿನ್ನವಾಗಿವೆ.

About the Author

ಅನು ಬೆಳ್ಳೆ (ರಾಘವೇಂದ್ರರಾವ)

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...

READ MORE

Related Books