ಕಥಾ ಸಿರಿ

Author : ಸರ್ವಮಂಗಳ ಜಯರಾಂ

Pages 160

₹ 130.00




Year of Publication: 2021
Published by: ಸರಸ್ವತಿ ಬುಕ್ ಏಜೆನ್ಸಿ. ಬೆಂಗಳೂರು
Phone: 9448537789

Synopsys

ಲೇಖಕಿ ಸರ್ವಮಂಗಳ ಜಯರಾಂ ಅವರ ಎರಡನೇ ಕೃತಿ ಕಥಾ ಸಿರಿ. ಈ ಕಥಾ ಸಂಕಲದಲ್ಲಿ ಹಿರಿಯ ಸಾಹಿತಿ ಎ.ಸರಸಮ್ಮ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ತನ್ನ ಅನುಭವಗಳ ಮಾಲೆ ಸ್ಮೃತಿ ಪಟಲದಿಂದ ಹೊರಬಂದು ವಾಸ್ತವಕ್ಕೆ ಹತ್ತಿರವಾದ ಸಂಗತಿಗಳು ಕಥೆಯ ರೂಪ ಪಡೆದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಅವರ ಕಳಕಳಿ ಮೆಚ್ಚುವಂತದ್ದು ಎಂದಿದ್ದಾರೆ.

ಬೆನ್ನುಡಿಯ ಮಾತುಗಳಲ್ಲಿ ಖ್ಯಾತ ಲೇಖಕಿ ವಸುಂಧರಾ ಭೂಪತಿ ಅವರು ಬರೆದಿರುವಂತೆ, ಇಲ್ಲಿನ ಕಥೆಗಳು ಮಹಿಳೆಯರ ನೋವು, ನಲಿವು, ದುಗುಡ ದುಮ್ಮಾನಗಳನ್ನು ಎಳೆ ಎಳೆಯಾಗಿ ತೆರೆದಿಡುತ್ತಾ ಹೋಗುತ್ತವೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ .ಇಲ್ಲಿ ಸಣ್ಣ ಕಥೆ, ನೀಳ್ಗಥೆ, ನ್ಯಾನೋ ಕಥೆಗಳನ್ನು ಒಟ್ಟಿಗೇ ಕಾಣಬಹುದು. ಮಹಿಳೆಯರ ಅಮಾಯಕತೆಯೊಂದಿಗೆ ಆಟವಾಡುವ ಪುರುಷರ ನಯವಂಚಕತನವನ್ನು ಹೇಳುತ್ತಲೇ ಪುರುಷ ಜಗತ್ತಿನ ಹಲವು ಮುಖಗಳ ಅನಾವರಣ ಮಾಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಜಾಗತೀಕರಣದ ಪ್ರಭಾವದಿಂದ ಮಹಿಳೆಯು ಬಳಸಿ ಬಿಸಾಡುವ ಸಂಸ್ಕೃತಿಯ ಭಾಗವಾಗಿರುವುದರ ಬಗ್ಗೆ" ಕಥಾ ಸಿರಿ " ಕಥಾ ಸಂಕಲನವು ವ್ಯಂಗ್ಯ ವಾಡುತ್ತದೆ ಎಂದಿದ್ದಾರೆ.

About the Author

ಸರ್ವಮಂಗಳ ಜಯರಾಂ

ಸರ್ವಮಂಗಳ ಜಯರಾಂ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ಜನಿಸಿದವರು. ಇವರು ಎಂ.ಎ. ಬಿ.ಎಡ್ ಪದವೀಧರರಾಗಿದ್ದು ಪ್ರಸ್ತುತ ಗೌರಿಬಿದನೂರಿನ SSEA ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಇವರು ಕವಿಗಳಾಗಿ, ಲೇಖಕರಾಗಿ, ಹಾಗೂ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಗುರ್ತಿಸಿಕೊಂಡಿದ್ದಾರೆ. ಇವರ ಪ್ರಥಮ ಕವನ ಸಂಕಲನ "ಕಾವ್ಯ ಕುಸುರಿ" ಯು 2020 ರಲ್ಲಿ ಲೋಕಾರ್ಪಣೆಗೊಂಡಿದೆ. ಇವರ ಎರಡನೆಯ ಕೃತಿ "ಕಥಾ ಸಿರಿ" ಕಥಾ ಸಂಕಲನವು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಇವರಿಗೆ ಸಾಹಿತ್ಯೋತ್ಸವ ಪ್ರಶಸ್ತಿ, ಯೋಗಿ ನಾರೇಯಣ ಪ್ರಶಸ್ತಿ, ವಾಗ್ಧೇವಿಯ ವರಪುತ್ರಿ ಪ್ರಶಸ್ತಿ... ಹೀಗೆ ಹಲವಾರು ಪ್ರಶಸ್ತಿಗಳು ...

READ MORE

Related Books