ಕರವೀರದ ಗಿಡ

Author : ಅನುಪಮಾ ಪ್ರಸಾದ್

Pages 120

₹ 80.00




Year of Publication: 2010
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113
Phone: 9840354507

Synopsys

‘ಕರವೀರದ ಗಿಡ’ ಲೇಖಕಿ ಅನುಪಮಾ ಪ್ರಸಾದ್ ಅವರ ಕತಾಸಂಕಲನ. ಹಿರಿಯ ಸಾಹಿತಿ ಜಿ.ಪಿ. ಬಸವರಾಜು ಮುನ್ನುಡಿ ಬರೆದು ‘ಅನುಪಮಾ ಪ್ರಸಾದ್ ಅವರ ಕತೆಗಳನ್ನು ಓದುವಾಗ ಅವು ಕಾಡಿನ ಚೆಲುವನ್ನೂ ಹಿಡಿಯುತ್ತವೆ; ನಿಗೂಢವನ್ನೂ ಭೇದಿಸಲು ಯತ್ನಿಸುತ್ತವೆ. ಈ ಅರ್ಥದಲ್ಲಿ ಅನುಪಮಾ ಮಲೆನಾಡಿನ ಹೊರಗಿನವರೂ ಹೌದು; ಒಳಗಿನವರೂ ಹೌದು. ಹೊರಗಿನವರ ವಸ್ತುನಿಷ್ಠತೆ ಮತ್ತು ಒಳಗಿನವರ ಕಾಳಜಿ-ಎರಡೂ ಅನುಪಮಾ ಅವರ ಕಥಾಶೋಧದಲ್ಲಿ ಕಾಣಿಸುತ್ತವೆ’ ಎನ್ನುತ್ತಾರೆ. ಜೊತೆಗೆ ತಮ್ಮ ಬಾಲ್ಯವನ್ನು ಮಾತ್ರ ಇಂಥ ಪರಿಸರದಲ್ಲಿ ಕಳೆದ ಅನುಪಮಾ ನಂತರದ ದಿನಗಳಲ್ಲಿ ಈ ಪರಿಸರದಿಂದ ದೂರಸರಿದವರು. ಈಗ ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪದ ಪೆರ್ಣೆಯಲ್ಲಿ ವಾಸವಾಗಿರುವವರು. ಆದರೂ ಅವರ ಸೃಜನಶೀಲ ಸೆಲೆ ಹೆಚ್ಚು ಉತ್ಸಾಹದಿಂದ ಚಿಮ್ಮುವುದು- ನಿಗೂಢವಾದ ಮಲೆನಾಡಿನ ಶೋಧದಲ್ಲಿಯೇ. ಅಲ್ಲಿನ ಭಾಷೆಯನ್ನು ಅವರು ಬಳಸುವ ರೀತಿ, ಪರಿಸರವನ್ನು ಕಟ್ಟಿಕೊಡುವ ವೈಖರಿ, ವ್ಯಕ್ತಿಗಳನ್ನು ಜೀವಂತಿಕೆ ಚಿಮ್ಮುವಂತೆ ಹಿಡಿದಿಡುವ ರೀತಿ ಅವರ ಪ್ರತಿಭೆಯನ್ನು, ಸೃಜನಶೀಲ ಸಾಮರ್ಥ್ಯವನ್ನು ತೋರಿಸುತ್ತವೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಅನುಪಮಾ ಪ್ರಸಾದ್
(07 October 1971)

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...

READ MORE

Related Books