ಉತ್ತರಾರ್ಧ

Author : ಜಯಶ್ರೀ ದೇಶಪಾಂಡೆ

Pages 136

₹ 110.00




Year of Publication: 2020
Published by: ತೇಜು ಪಬ್ಲಿಕೇಷನ್ಸ್
Address: ವಿ. ಪದ್ಮಾವತಿ #1014, 24ನೇ ಮುಖ್ಯರಸ್ತೆ, ಬಿಎಸ್.ಕೆ 2ನೇ ಹಂತ, ಬೆಂಗಳೂರು- 560070
Phone: 9900195626

Synopsys

‘ಉತ್ತರಾರ್ಧ’ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆ ಅವರ ಕಥಾಸಂಕಲನ. ಈ ಸಂಕಲನಕ್ಕೆ ಪಿ.ಶೇಷಾದ್ರಿ ಅವರು ಮುನ್ನುಡಿ ಬರೆದು ‘ನಾನು ಜಯಶ್ರೀ ದೇಶಪಾಂಡೆಯವರ ಅನೇಕ ಕತೆಗಳನ್ನು ಓದಿದ್ದೇನೆ. ನನಗೆ ಅವರ ಬರಹ ಇಷ್ಟವಾಗುವುದಕ್ಕೆ ಮುಖ್ಯ ಕಾರಣವೆಂದರೆ, ಅವರೆಂದೂ ಕತೆಗಳನ್ನು ಸೃಷ್ಟಿಸುವುದಿಲ್ಲ, ಆಕರ್ಷಕವಾಗಿ ಕತೆಯನ್ನು ಹೇಳುವ ಚಪಲವೂ ಅವರಿಗಿಲ್ಲ. ಅವರ ಕತೆಗಳು ತಮ್ಮಷ್ಟಕ್ಕೆ ತಾವೇ ವಸ್ತು, ವಿವರಣೆ, ಮಾತುಗಾರಿಕೆ ಮತ್ತು ಕಲ್ಪಕತೆಯಿಂದ ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತಾ ಹೋಗುತ್ತವೆ. ಹಾಗಾಗಿ ಕನ್ನಡದ ಪ್ರಮುಖ ಕತೆಗಾರ್ತಿಯರಲ್ಲಿ ಜಯಶ್ರೀ ದೇಶಪಾಂಡೆ ಕೂಡ ಒಬ್ಬರಾಗಿದ್ದಾರೆ’ ಎನ್ನುತ್ತಾರೆ.

ಜೊತೆಗೆ, ಜಯಶ್ರೀ ಅವರ ಕತೆಗಳ ಮತ್ತೊಂದು ವೈಶಿಷ್ಟ್ಯವೆಂದರೆ ಅವು ರಂಜನೆಯ ತುಣುಕುಗಳಲ್ಲ; ಅಲ್ಲಿ ಬದುಕಿನ ಮರ್ಮ ಅಡಗಿದೆ. ಅವರ ಕಥಾಸಂವಿಧಾನದ ಕೌಶಲ ಯಾರನ್ನಾದರೂ ನಿಬ್ಬೆರಗಾಗಿಸುವಂತಹದ್ದು, ಮುಖ್ಯವಾಗಿ ಇವು ಪ್ರಾದೇಶಿಕ ನೆಲೆ-ನಿಲುಮೆಗಳನ್ನು ಹೊತ್ತಿರುವುದು ವಿಶೇಷ. ಇತ್ತೀಚೆಗೆ ಜಯಶ್ರೀ ದೇಶಪಾಂಡೆಯವರು ತಮ್ಮ ಹೊಸಾ ಐದು ಕತೆಗಳನ್ನು ಓದುವ ಅವಕಾಶವನ್ನು ನನಗೆ ದೊರಕಿಸಿಕೊಟ್ಟರು. ಅವು `ಒಂದು ಡೈವೋರ್ಸ್‍ನ ಉತ್ತರಾರ್ಧ’, `ರೆಫ್ಯೂಜಿ’, `ನಗೆಯೇ ನಿನ್ನ ಹೆಸರೇನು?’, `ಗತ’ ಮತ್ತು `ಒಂದು ಗಾಲಿಕುರ್ಚಿ ಹೇಳಿದ ಕತೆ’. ಇಲ್ಲಿನ ಬಹುತೇಕ ಕತೆಗಳು ನಿರೂಪಿತವಾಗಿರುವುದು ಕತೆಗಾರ್ತಿಯ ಮೂಲಕ. ಹಾಗಾಗಿ ಇವು ಬರಿಯ ಅಕ್ಷರಗಳಾಗಿ ಬಿಂಬಿತವಾಗದೆ ನಮ್ಮ ಆಪ್ತರೊಬ್ಬರು ನಮ್ಮೆದುರು ಕುಳಿತು ಕತೆ ಹೇಳುತ್ತಿದ್ದಾರೇನೋ ಎಂದು ಭಾಸವಾಗುವಂತೆ ತೆರೆದುಕೊಳ್ಳುವುದು ಇದರ ವಿಶಿಷ್ಟ ತಂತ್ರ ಎಂದೂ ಗುರುತಿಸಬಹುದು’ ಎಂದು ಪ್ರಶಂಸಿಸಿದ್ದಾರೆ. 

About the Author

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.  ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ...

READ MORE

Related Books