ಏಕತಾರಿ

Author : ಚನ್ನಪ್ಪ ಕಟ್ಟಿ

Pages 140

₹ 120.00
Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರು ಅಂಚೆ, ಬಳ್ಳಾರಿ ಜಿಲ್ಲೆ
Phone: 9480353507

Synopsys

ಗ್ರಾಮೀಣ ಬದುಕು- ಬವಣೆ, ಸಂತಸ, ದುಖಃ,ಆಡು- ಪಾಡು, ಗದ್ದೆ ಮನೆ, ಹೀಗೆ ಹಳ್ಳಿಗಾಡಿನ ಸೊಗಡನ್ನು ವಿವರಿಸುವಂತಹ ಅಪ್ಪಟ್ಟ ಗ್ರಾಮೀಣ ಕಥೆಗಳು ಈ ಕೃತಿಯಲ್ಲಿವೆ. ಹಳ್ಳಿ ಬದುಕನ್ನು ಸಹಜವಾಗಿಯೇ ವಿವರಿಸುತ್ತಾ ಭಿನ್ನ ಆಯಾಮಗಳನ್ನು ನೀಡುವ ಕಥೆಗಳು ಓದುಗರ ಮನ ಮುಟ್ಟುತ್ತವೆ. 

ಹಿನ್ನುಡಿಯಲ್ಲಿ ಒಂದರ್ಥದಲ್ಲಿ ಇಲ್ಲಿಯ ಬಹುತೇಕ ಕತೆಗಳು ಅರಿವಿನ ಯಾತ್ರೆಗಳಾಗಿವೆ. ಕುಸಿಯುತ್ತಿರುವ ವರ್ತಮಾನದ ಮಧ್ಯೆ ಗ್ರಾಮೀಣ ಜನತೆಯ ನಂಬಿಕೆಗಳು ಸೂರ್ಯನಿಗೆ ಸಮ ಸಮವಾಗಿ ಫಳ ಫಳ ಹೊಳೆಯುತ್ತವೆ. ಎನ್ನುವ ಎಸ್.ಎಂ.ಯೋಗಪ್ಪನವರ ಅವರು ಚನ್ನಪ್ಪ ಅವರ ಬರವಣಿಗೆಗಳಲ್ಲಿ ನಮ್ಮ ನೆಲದ ಕೂಗನ್ನು ಬಿಟ್ಟರೆ ಮತ್ತೇನೂ ಕೇಳಿಸಲಾರದು! ಎಂದು ಕೃತಿಯ ಹಂದರವನ್ನು ವಿವರಿಸುತ್ತಾರೆ. ಈ ಕೃತಿಯಲ್ಲಿ ಬಳಸಿರುವ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯು ಜನಪದ ಮಣ್ಣಿನ ಸೊಗಡು, ಉಪಮೆಗಳು ಓದುಗನ ಕೈಯಲ್ಲಿ ಕಣ್ಣುಗಳನ್ನಿಟ್ಟಂತಿವೆ.

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Conversation

Related Books