ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ

Author : ಚಲಂ ಹಾಡ್ಲಹಳ್ಳಿ

Pages 108

₹ 100.00




Year of Publication: 2019
Published by: ಆಕೃತಿ ಪುಸ್ತಕ
Address: #31/1, 12ನೇ ಮುಖ್ಯರಸ್ತೆ, 3ನೇ ಹಂತ, ಭಾಷ್ಯಂ ವೃತ್ತದ ಸಮೀಪ, ರಾಜಾಜಿನಗರ, ಬೆಂಗಳೂರು- 560010
Phone: 08023409479

Synopsys

ಚಲಂ ಹಾಡ್ಲಹಳ್ಳಿ ಅವರ ಕತಾಸಂಕಲನ ‘ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ’. ಈ ಶೀರ್ಷಿಕೆಯೇ ಆಕರ್ಷಕವಾಗಿದೆ. ನಾನಾ ಅರ್ಥಗಳನ್ನು ಧ್ವನಿಸುತ್ತದೆ. ಕಾಲವೇ ತೆಗೆದುಕೊಳ್ಳುವ ನಿರ್ಧಾರಗಳ ಎದುರು ಮನುಷ್ಯ ಕೇವಲ ಬೊಂಬೆಯಂತಾಗಿಬಿಡುತ್ತಾನೆ ಎನ್ನುವುದಕ್ಕೆ ಈ ಕತೆ ಅತ್ಯುತ್ತಮ ಉದಾಹರಣೆ ಎನ್ನಬಹುದು.

ಒಂದು ಸಾಮಾನ್ಯ ವಿಷಯವನ್ನುು ಹೇಗೆ ಉತ್ತಮ ಕತೆಯಾಗಿ ರೂಪಿಸಬಹುದು ಎನ್ನುವುದಕ್ಕೆ ಸೀರಿಯಸ್ ನೆಸ್ ಎಂಬ ಕುಣಿಕೆ ಅತ್ಯುತ್ತಮ ಉದಾಹರಣೆಯಾಗಿದೆ. ಆ ಎರಡೂವರೆ ಅಕ್ಷರದ ಉತ್ತರ ಎಂಬ ಕತೆಯಲ್ಲಿ ಪ್ರಕೃತಿಯನ್ನು ಕತೆಯ ಓಟಕ್ಕೆ ತಕ್ಕಂತೆ ಬಳಸಿಕೊಂಡು ಅದರಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.ಇಂತಹ ಹಲವು ಕಾಡುವ ಕತೆಗಳು ಈ ಸಂಕಲನದಲ್ಲಿವೆ.

About the Author

ಚಲಂ ಹಾಡ್ಲಹಳ್ಳಿ

ಚಲಂ ಹಾಡ್ಲಹಳ್ಳಿ ಅವರ ಮೂಲ ಹೆಸರು ಪ್ರಸನ್ನ ಕುಮಾರ್ ಹೆಚ್.ಎನ್. ತಂದೆ- ಹಾಡ್ಲಹಳ್ಳಿ ನಾಗರಾಜ್, ತಾಯಿ- ಭವಾನಿ. ಹಾಡ್ಲಹಳ್ಳಿ ಅವರ ಊರು. ಕವಿಯಾಗಿ, ಕತೆಗಾರರಾಗಿ, ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಚಲಂ ಅವರ  ಮೊದಲ ಕತಾಸಂಕಲನ ‘ಪುನರಪಿ’. ಅದಕ್ಕೂ ಮೊದಲು ’ಅವಳ ಪಾದಗಳು’ ಎಂಬ ಕವನ ಸಂಕಲನ ಪ್ರಕಟಗೊಂಡಿತ್ತು. ನಾನಾ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿರುವ ಅವರ ಹಲವಾರು ನಾಟಕ ಪ್ರದರ್ಶನಗಳಿಗೆ ದುಡಿದಿದ್ದಾರೆ.  ಹಾಸನದ ಜೇನುಗಿರಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಜಾಣಗೆರೆ ಪತ್ರಿಕೆ, ಅಗ್ನಿ, ಗೌರಿಲಂಕೇಶ್, ಜನತಾಮಾದ್ಯಮ, ಜನಮಿತ್ರ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ...

READ MORE

Reviews

ನಿಜ; ಪುಸ್ತಕದ ಶೀರ್ಷಿಕೆಯೇ ಅತ್ಯಾಕರ್ಷಕವಾಗಿದೆ. ಇದು ಹಲವು ಧ್ವನಿ, ಅರ್ಥಗಳನ್ನೂ ಸ್ಫುರಿಸುತ್ತದೆ. ಈ ಕೃತಿಯಲ್ಲಿ ಹನ್ನೆರಡು ಕಥೆಗಳಿವೆ. ಒಂದೊಂದು ಕಥೆಯೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕಥೆಯೊಳಗಿನ ವಸ್ತುಗಳು ಅಚ್ಚರಿ ಹುಟ್ಟಿಸುತ್ತವೆ. ಇವು ಇಲ್ಲೇ ನಮ್ಮ ಸುತ್ತಮುತ್ತ ಘಟಿಸಿದಂತೆ, ನಾವು ನೋಡಿದಂತೆ ಇವೆಯಲ್ಲಾ ಎನಿಸುತ್ತವೆ. ಗ್ರಾಮೀಣ ಮತ್ತು ನಗರದಲ್ಲಿನ ಬದುಕಿನ ಅಂತರ ಉಂಟು ಮಾಡುವ ಮಾನಸಿಕ ಸಂಘರ್ಷ, ಗಂಡು– ಹೆಣ್ಣಿನ ನಡುವಿನ ಸಂಬಂಧ, ಪ್ರಕೃತಿಯಲ್ಲಿ ಘಟಿಸುವ ಆಗು–ಹೋಗುಗಳು ಇಲ್ಲಿನ ಕಥೆಗಳ ತಿರುಳಾಗಿವೆ. ‘ಆ ಎರಡೂವರೆ ಅಕ್ಷರದ ಉತ್ತರ’ ಕಥೆಯೂ ಓದುಗರ ಮನಸನ್ನು ತೀವ್ರವಾಗಿ ತಟ್ಟುತ್ತದೆ. ‘ಒಂದರ್ಧ ಪ್ರೀತಿಯ ಕಥೆ’, ‘ಪಾರಿಜಾತ’, ‘ಅವಮಾನಿತರು’, ‘ಬೆಹರೂಪಿಯಾ’, ‘ಕಗ್ಗಂಟಾದ ಕಥಾವಸ್ತು’ ಕಥೆಗಳು ಓದುತ್ತಾ ಹೋದಂತೆ ಹೆಚ್ಚು ಆಪ್ತವಾಗುತ್ತವೆ. ‘ಅವಮಾನಿತರು’ ಕಥೆಯ ತಿಲಕ, ಆತನ ಅಮ್ಮ, ಶಾರದಾ, ಶಾಮಭಟ್ಟರ ಪಾತ್ರಗಳು ಬಿಟ್ಟುಬಿಡದೆ ಮನಸಿಗೆ ತಾಕುತ್ತವೆ. ಕೊನೆಯಲ್ಲಿ ಬರುವ ಕಥೆ ‘ಎಲ್ಲಾ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ’ ಹೆಚ್ಚು ಕಾಡುತ್ತದೆ. ಇದರಲ್ಲಿನ ಪಾತ್ರಗಳಾದ ರಾಜಣ್ಣ, ಪ್ರಮೀಳಾ ಮತ್ತು ರಶ್ಮಿ ಓದುಗನ ಮನಸನ್ನು ಗಾಢವಾಗಿ ಆವರಿಸಿಕೊಳ್ಳುತ್ತಾರೆ.

ಕೃಪೆ: ಪ್ರಜಾವಾಣಿ, (2020 ಫೆಬ್ರುವರಿ 02)

Related Books