ಒಂದು ಹೆಣದ ಸುತ್ತಮುತ್ತ

Author : ವೀರಭದ್ರ ಕೌದಿ

Pages 108

₹ 120.00




Year of Publication: 2015
Published by: ಅಜೇಯ ಪ್ರಕಾಶನ
Address: ಬಸವಶ್ರೀ, ಮಹಾತ್ಮಾ ಗಾಂಧಿ ಹೌಸಿಂಗ್ ಕಾಲೋನಿ, ಬೈಲಹೊಂಗಲ, ಬೆಳಗಾವಿ

Synopsys

ಲೇಖಕ ವೀರಭದ್ರ ಕೌದಿ ಅವರ ಸಣ್ಣ ಕತೆಗಳ ಸಂಕಲನ ‘ಒಂದು ಹೆಣದ ಸುತ್ತಮುತ್ತ’. ಸಮಕಾಲೀನ ಲೇಖಕರಲ್ಲಿ ಗಂಭೀರ ಮನೋಧರ್ಮದ ಕತೆಗಾರ ವೀರಭದ್ರ ಕೌದಿ ಅವರು ಇಂಗ್ಲಿಷ್ ಅಧ್ಯಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ಹುಟ್ಟಿದ, ನಿಂತ ನೆಲದ ಬಗ್ಗೆ ಅಲ್ಲಿನ ಬದುಕಿನ ಬಗ್ಗೆ, ಭಾಷೆಯ ಬಗ್ಗೆ, ಹಳ್ಳಿಯ ಸೊಗಸು, ಸೊಗಡು ಮುಗ್ಧತೆಯನ್ನು ಸದಾ ಕಾಪಿಟ್ಟುಕೊಂಡು ಗ್ರಾಮೀಣ ಸೊಗಡನ್ನು ಅನುಭಾವಿಸಿ ಅಭಿವ್ಯಕ್ತಿಸುತ್ತಿರುವ ಅನನ್ಯ ಕತೆಗಾರರು. ಇಲ್ಲಿನ ಕತೆಗಳಲ್ಲಿಯೂ ಅವರ ನೈಪುಣ್ಯತೆ ಕಾಣುತ್ತದೆ. ಕೆನೆಗಟ್ಟಿದ ಬದುಕಿನ ಅನುಭವದ ಅಭಿವ್ಯಕ್ತಿಗೆ ಭಾಷೆ ತನ್ನತನ ತಂದುಕೊಟ್ಟಿದೆ.

 

About the Author

ವೀರಭದ್ರ ಕೌದಿ

ಪ್ರೊ. ವೀರಭದ್ರ ಕೌದಿ ಅವರು ತಾಳಿಕೋಟೆಯ ಖಾಸ್ಗತೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಮುದ್ದೇಬಿಹಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇದೀಗ ಬೈಲಹೊಂಗಲದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.  ಕನ್ನಡ ಸಾರಸ್ವತ ಲೋಕಕ್ಕೆ ‘ಬರ ಮತ್ತು ಹತ್ತು ಕಥೆಗಳು’, ಮತ್ತು ‘ಒಂದು ಹೆಣದ ಸುತ್ತಮುತ್ತ’ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ಅನುವಾದ ಕೃತಿಗಳು; ಕಪ್ಪತ ಗುಡ್ಡ(Riders to the sea), ನಾವಿಬ್ರು ಬೆರಕಿ ಅದಿವಿ(The Pie and the Tart) ...

READ MORE

Related Books