ಉರಿದ ಬದುಕು

Author : ಶಾಂತರಸ ಹೆಂಬೇರಾಳು

₹ 80.00
Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಲೇಖಕ ಶಾಂತರಸ ಅವರ ಕಥಾ ಸಂಕಲನ ಕೃತಿ ʻಉರಿದ ಬದುಕುʼ. ಪುಸ್ತಕದ ಬಗ್ಗೆ ಲೇಖಕರು, “ನನ್ನ ಕಥೆಗಳು ಕಾಲ್ಪನಿಕ. ಎಲ್ಲ ಪಾತ್ರಗಳೂ ಕೇವಲ ಕಲ್ಪನೆಯಲ್ಲಿ ಮೈದಳೆದುವೆಂದು ನಾನು ಸುಳ್ಳು ಹೇಳಲಾರೆ. ಸತ್ಯಘಟನೆಗಳ ಚಿಕ್ಕ ಚಿಕ್ಕ ಎಳೆಗಳು ಅವು ಎಲ್ಲೆಲ್ಲಿಂದಲೋ ಸಂಗ್ರಹವಾಗಿರುತ್ತವೆ, ಕೂಡಿ ಒಂದು ಕಥೆ ಕಟ್ಟಿಕೊಳ್ಳುತ್ತದೆ. ಯಾವ 'ಮಠ' ಕ್ಕೂ ನಾನು ಸೇರಿಲ್ಲ; ಯಾವ ಪಂಥದ ಗುರುತೂ ನನ್ನ ಹಣೆಯ ಮೇಲಿಲ್ಲ; ಯಾವ ಪ್ರಭಾವ ಪ್ರೇರಣೆಗಳಿಗೂ ನಾನು ಒಳಗಾಗಿಲ್ಲ. ನನ್ನ ದಾರಿಯಲ್ಲಿ ನಾನು ನಡೆದಿದ್ದೇನೆ. ತಂತ್ರದ ಬಗ್ಗೆ ನಾನೆ೦ದೂ ತಲೆಕೆಡಿಸಿಕೊಂಡಿಲ್ಲ. ನೇರವೋ ಬಳಸಿಯೋ ಅಂಕುಡೊಂಕಾಗಿಯೋ ಹೇಗೆ ಬಂತೋ ಹಾಗೆ ಕಥೆ ಮುಕ್ಕಾಗದಂತೆ, ಅದರ ಕೇಂದ್ರ ಕೆಡದಂತೆ ಪ್ರಾಮಾಣಿಕವಾಗಿ ಕಥೆ ಕಟ್ಟುತ್ತೇನೆ. ನನ್ನ ಭಾಷೆ ನನ್ನ ಹಳ್ಳಿ ಪಟ್ಟಣಗಳ ಭಾಷೆ. ಅದನ್ನು ಬಳಸುವಾಗ ನನಗೆ ಅತ್ಯಂತ ಖುಷಿಯಾಗುತ್ತದೆ. ನನ್ನ ರಕ್ತ, ಮಚ್ಚೆ, ಮಾಂಸ, ಜೀವದಿಂದ ಕೂಡಿದ್ದು ಈ ಭಾಷೆ. ಹೀಗೆ ಇವು ಬದುಕಿನಿಂದ ಆಯ್ದುಕೊಂಡ, ಜನಪರವಾದ, ಮಾನವೀಯತೆಯ ತುಡಿತವಿರುವ ಕಥೆಗಳು” ಎಂದು ಹೇಳಿದ್ದಾರೆ.

About the Author

ಶಾಂತರಸ ಹೆಂಬೇರಾಳು
(07 April 1924 - 13 April 2008)

ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಹೆಂಬೇರಾಳು ಶಾಂತರಸ ಅವರ ನಿಜನಾಮ ಶಾಂತಯ್ಯ. 1924ರ ಏಪ್ರಿಲ್ 7ರಂದು ಜನಿಸಿದರು. ತಂದೆ ಚೆನ್ನಬಸವಯ್ಯ- ತಾಯಿ ಸಿದ್ಧಲಿಂಗಮ್ಮ. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. 1939ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಶಾಲೆಯಿಂದ ಹೊರದೂಡಲಾಗಿತ್ತು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985), ರಾಜ್ಯ ನಾಟಕ ಅಕಾಡಮಿಯ ಫೆಲೋಷಿಪ್ (1993), ವಿದ್ಯಾವರ್ಧಕ ಸಂಘದ ಬಹುಮಾನ (1985), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (1997) ಮೊದಲಾದವು ಇವರಿಗೆ ಲಭಿಸಿದೆ. ಬೀದರ್ ನಲ್ಲಿ ನಡೆದ ...

READ MORE

Related Books