ಹಳೆಯ ಕಾಲದ ಹೊಸಕತೆ

Author : ಕೆ. ಸತ್ಯನಾರಾಯಣ

Pages 160

₹ 125.00
Year of Publication: 2002
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಇದು ಕೆ.ಸತ್ಯನಾರಾಯಣ ಅವರ ಮೂರನೇ ಕಥಾ ಸಂಕಲನ. ಎಲ್ಲಾ ದೃಷ್ಟಿಯಿಂದಲೂ ಇದೊಂದು ಅಚ್ಚುಕಟ್ಟಾದ ಕಥೆ. ‘ನಾವೇನ ಬೇಡುವುದು ಇವರ ಬಳಿ ಬಂದು’. ಈ ಅಚ್ಚುಕಟ್ಟುತನವೇ ಕತೆಯ ಮಿತಿಯೂ ಆಗಿಬಿಡಬಹುದಿತ್ತು. ಆದರೆ ಕತೆಗಾರರ ಪ್ರತಿಭೆ ಈ ಕುಶಲತೆಯನ್ನು ಮೀರಿ ಬದುಕಿನ ಆಳಕ್ಕೆ ಪ್ರವೇಶಿಸುವುದರಿಂದಾಗಿ ಕತೆ ಮುಖ್ಯವಾಗುತ್ತದೆ. ಕತೆಗಾರರ ನಿರೂಪಣಾ ಕ್ರಮ ಕನ್ನಡ ಕಥಾ ಪರಂಪರೆಯಿಂದ ಪಡೆದುಕೊಂಡಿದ್ದು, ಅಭಿಜಾತವೆನಿಸುವಂಥದು. ಈ ಮೂಲಕ ಕತೆಗಾರರ ನಿರ್ಮಿಸುವ ಜಗತ್ತು ಸಮಕಾಲೀನವಾಗಿದ್ದು, ನಾವೆಲ್ಲರೂ ಅನುಭವಿಸುತ್ತಿರುವ ವಿಷಾದಕರ ಸತ್ಯವೊಂದನ್ನು ಕತೆ ತನ್ನ ಆಕೃತಿಯನ್ನು ಅನುಭವಕ್ಕೆ ತರಲು ಪ್ರಯತ್ನಿಸುತ್ತದೆ. ನಾವು ಪ್ರೀತಿಸುವ ಶಕ್ತಿಯನ್ನೇ ಕಳೆದುಕೊಂಡು ಬಿಟ್ಟಿದ್ದೇವೆಯೇ. ಪ್ರೀತಿಸುವ ಎಳೆಯ ಹೃದಯಗಳೂ ಕ್ರಮೇಣ ತಲುಪುವ ಸ್ಥಿತಿ ಯಾವುದು. ರಮ್ಯ ಕಲ್ಪನೆಗೂ ವಾಸ್ತವಕ್ಕೂ ನಡುವೆ ಪ್ರವೇಶಿಸುವ ಶಕ್ತಿಗಳು ಯಾವುವು. ಇಂಥ ಅನೇಕ ಪ್ರಶ್ನೆಗಳನ್ನು ಕತೆ ನಮ್ಮ ಮುಂದಿಡುತ್ತದೆ. ನಮ್ಮನ್ನು ತಲ್ಲಣಗೊಳಿಸುವ ಶಕ್ತಿ ಕತೆಗಿಲ್ಲದಿದ್ದರೂ ಸೂಕ್ಷ್ಮ ಕಂಪನದ ಮೂಲಕ ಸೆಳೆದು ನಿಲ್ಲುಸುತ್ತದೆ. ಬೆಳಗೆರೆ ಪಾರ್ವತಮ್ಮ ನೆನಪಿನ ಪುಸ್ತಕ ಮಾಲೆಯಲ್ಲಿ ಪ್ರಕಟವಾದ ಕೃತಿ 'ಹಳೆಯ ಕಾಲದ ಹೊಸ ಕತೆ'.

ಕೃತಿ ಕಥಾಕ್ರಮವನ್ನು ನೋಡುವುದಾದರೆ ‘ಹೊಸಕಾಲದ ಹಿಂಸೆ’, ‘ಅಪಂಡಿತ್-ರಮಾಬಾಯಿ-1998’, ‘ರೂಪಾಯಿ ಗುಟ್ಟು ಮತ್ತು ರಾಜಕುಮಾರಿ ಡಯಾನಾ’, ‘ನಾವೇನ ಬೇಡುವುದು ಇವರ ಬಳಿಬಂದು’, ‘ವರ್ಷಾಂತಿಕ’, ‘ಕಿಸಾಗೌತಮಿಗೊಂದು ಕಥೆ’, ‘ಕತೆಯಂತೂ ಒಂದೇ,ಕನಸುಗಳ ಮಾತ್ರ’, ‘ದಲಿತರ ವಿಡಿಯೋ ಪುರಾಣ’, ‘ಇಳಿವಯಸ್ಸಿನ ಡೈವೊರ್ಸ್’, `ಹೇಳಿ,ಇವರೇಕೆ ಕತೆಯಾಗಬೇಕು’, ‘ಮಸಣದಿ ಪೇಳಿಕೊಂಡ ಮಗನ ಕತೆ’, ಗ್ರಹಾಂಬೆಲ್ ಗು ಕೇಳದ ಕತೆ’, ಮಧುಗಿರಿ ರಾಮು ಮತ್ತು ಸಾಹಿತಿ ಮುದುಕಪ್ಪ’, ‘೧೦೦೧ನೇ ಕಣ್ಣು’ ಎಂಬಂತಿದೆ..

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books