ಗಾಂಧಿ ವೃತ್ತದ ದಂಗೆ

Author : ಕುಮಾರ ಬೇಂದ್ರೆ

Pages 128

₹ 85.00
Year of Publication: 2012
Published by: ಕಣ್ವ ಪ್ರಕಾಶನ
Address: ಕಾಲಾ ಕನಸು, ನಂ. 894, ಮೊದಲನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರಲೇಔಟ್, ಬೆಂಗಳೂರು- 560072
Phone: 080-23426778

Synopsys

ಕುಮಾರ ಬೇಂದ್ರೆ ಗ್ರಾಮೀಣ ಬದುಕಿನ ಏಳು ಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅಲ್ಲಿನ ಜನಜೀವನದ ನೋವು ನಲಿವುಗಳನ್ನು ಅನುಭವಿಸಿದವರು. ನಾಲ್ಕು ಕಥಾಸಂಕಲನ, ಎರಡು ಕಾದಂಬರಿ ಹಾಗೂ ಇತರ ಕೃತಿಗಳನ್ನು ಪ್ರಕಟಿಸಿರುವ ಕುಮಾರ ಪರಿಶ್ರಮದ ಬರಹಗಾರ, ಒಟ್ಟು ಹನ್ನೆರಡು ಕತೆಗಳಿರುವ ಈ ಸಂಕಲನದಲ್ಲಿ ವೈವಿಧ್ಯಮಯ ವಿಷಯವಸ್ತುಗಳು, ಶೈಲಿ, ನಿರೂಪಣೆಗಳಿದ್ದರೂ ಶ್ರದ್ದೆಯಿಂದ ಕಥೆ ಹೇಳಬೇಕು ಮತ್ತು ಆ ಮೂಲಕ ಒಂದು ಬಿಡುಗಡೆಯ ಆನಂದ ಪಡೆಯಬೇಕೆಂಬ ಹಂಬಲವಿದೆ. ತನ್ನ ಸುತ್ತಲಿನ ಬದುಕಿನಿಂದ ನಿರಂತರ ಪ್ರೇರಣೆ ಪಡೆದು ಹೆಚ್ಚೆಚ್ಚು ಬರೆಯಬೇಕೆನ್ನುವುದಷ್ಟೇ ಅಲ್ಲ. ಹೊಸದನ್ನು ಹೇಳಬೇಕೆನ್ನುವ ತುಡಿತವೂ ಇದೆ. ಪ್ರಾಮಾಣಿಕವಾಗಿ ಸಂತೋಷಪಡುವ ಮನೋಭಾವದ ಕುಮಾರ ಬೇಂದ್ರೆ ಒಬ್ಬ ವಾಸ್ತವವಾದಿ, ಇದನ್ನು ಬದಿಗಿರಿಸಿ ತನ್ನದೇ ಆದ ಕಲ್ಪನಾ ಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸಿದಾಗೆಲ್ಲ ವಿಭಿನ್ನ ಕಥನಗಳು ಜನ್ಮ ಪಡೆದಿರುವ ಪ್ರಕ್ರಿಯೆಯನ್ನು ಈ ಕಥಾಗುಚ್ಚದಲ್ಲಿ ಕಾಣಬಹುದು.

ಸಂಕಲನದ ಪ್ರಮುಖ ಕಥೆ 'ಗಾಂಧಿ ವೃತ್ತದ ದಂಗೆ' ಸಮಕಾಲೀನ ಸಮಾಜದ ರಾಕ್ಷಸಿ ಪಿಡುಗಾದ ಭ್ರಷ್ಟಾಚಾರ ಕುರಿತಾದ ವಸ್ತುವನ್ನು ಒಳಗೊಂಡಿದೆ. 'ದೇವರ ನೆಲೆ" *ಶಿವಪುರದ ಸಿದ್ದಪ್ಪನ ಜಾತಿ ಕಥೆಗಳಲ್ಲಿ ಕಥೆಗಾರನನ್ನು ತೀವ್ರವಾಗಿ ಕಾಡಿದ ಮತ್ತೊಂದು ಸಂಗತಿಯೆಂದರೆ ದೈವದ ಹೆಸರಿನಲ್ಲಿ ನಡೆಯುವ ಆಡಂಬರದ ಆಚರಣೆ, ದೇವರು-ದಿಂಡಿರ ಹೆಸರಲ್ಲಿ ಜನಸಮುದಾಯ ಸಮೂಹ ಸನ್ನಿಗೊಳಗಾದಂತೆ ವರ್ತಿಸುತ್ತ ನಡೆಸುವ ಅತಿರೇಕಗಳನ್ನು ಕಲಾತ್ಮಕ ಶೈಲಿಯಲ್ಲಿ ಕಟ್ಟಿಕೊಡಲು ಯತ್ನಿಸಿದ್ದಾರೆ.

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books