ಊರು ಹೇಳದ ಕಥೆ

Author : ಯಶಸ್ವಿನಿ ಕದ್ರಿ

₹ 150.00




Year of Publication: 2021
Published by: ಆಕೃತಿ ಅಕ್ಷಯ ಪಬ್ಲಿಕೇಷನ್ಸ್
Address: ಮಂಗಳೂರು
Phone: 08242972002

Synopsys

‘ಊರು ಹೇಳದ ಕಥೆ’ ಕೃತಿಯು ಯಶಸ್ವಿನಿ ಕದ್ರಿ ಅವರ ಕತಾಸಂಕಲನವಾಗಿದೆ. ಈ ಕೃತಿಯ ಕುರಿತು ವಿವೇಕ ರೈ ಅವರು, ಯಶಸ್ವಿನಿಯ ಕಥೆಗಳು ಓದುತ್ತಾ ಹೋದಂತೆಲ್ಲ ಒಂದು ಊರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸ್ಥಳಪುರಾಣ ಇತಿಹಾಸ ವರ್ತಮಾನಗಳನ್ನು ಬೆಸೆಯುತ್ತವೆ. ಅಪ್ಪಟ ವಾಸ್ತವಿಕತೆಯ ಆವರಣದಲ್ಲಿ ಪ್ಯಾಂಟಸಿಗಳನ್ನು ಸೃಷ್ಟಿಸುತ್ತವೆ. ಸುಪ್ತಪ್ರಜ್ಞೆಯ ಬಯಕೆಗಳನ್ನು ಈಡೇರಿಸುವ ಭಾಷೆಯ ಅಡಗುತಾಣಗಳಾಗುತ್ತವೆ. ಒಂದು ಕಥೆಯ ಒಳಗೆ ಅನೇಕ ಮರಿಕಥೆಗಳು ಹುಟ್ಟಿಕೊಳ್ಳುತ್ತವೆ. ಕಥೆಯ ಹಂದರದಲ್ಲಿ ಊರಿನ ಎಲ್ಲರನ್ನೂ ಸಿಕ್ಕಿಸಿಕೊಂಡು 'ಹೆಟರಗ್ಲಾಸಿಯ'ದ ಧ್ವನಿಗಳನ್ನು ಹೊರಡಿಸುತ್ತವೆ. ತ್ರೀವಾದದ ವಾಚ್ಯ ಘೋಷಣೆಗಳಲ್ಲದೆ ಯಶಸ್ವಿನಿ ತನ್ನ ಕತೆಗಳಲ್ಲಿ ಸ್ತ್ರೀ ಪಾತ್ರಗಳನ್ನು ಚಿತ್ರಿಸುವ ವೈವಿಧ್ಯವು ಕನ್ನಡ ಕಥಾಜಗತ್ತಿನಲ್ಲಿ ಗಮನಿಸಬೇಕಾದದ್ದು. ಅವರ ಕತೆಗಳಲ್ಲಿನ ಚಿತ್ರಕ ಶೈಲಿ ಮತ್ತು ವಿಡಂಬನೆಯನ್ನು ಭಾಷೆಯಲ್ಲಿ ಕಟ್ಟಿಕೊಡುವ ಕ್ರಮ ಬಹಳ ಸೊಗಸಾದುದು. ಸಂಭಾಷಣೆಗಳಲ್ಲಿ ಬರುವ ತುಳು ಸಂಸ್ಕೃತಿಯ ನುಡಿಗಟ್ಟುಗಳು ಕನ್ನಡ ಕಥನ ಸಾಹಿತ್ಯಕ್ಕೆ ವಿಶೇಷ ಮೆರುಗನ್ನು ಕೊಡುತ್ತವೆ. ತಮ್ಮ ಮೊದಲ ಸಂಕಲನದ ಮೂಲಕವೇ ನಮ್ಮ ನೆಲದ ಬದುಕಿನ ಬಹುರೂಪಿ ಕತೆಗಳನ್ನು ಮೈಮನಗಳಿಗೆ ನವಿರೇಳಿಸುವಂತೆ ಕೊಟ್ಟ ಯಶಸ್ವಿನಿಯವರನ್ನು ಅಭಿನಂದಿಸಲು ಸಂತೋಷಪಡುತ್ತೇನೆ. ಕನ್ನಡ ಓದುಗ ವರ್ಗದವರು ಇವರ ಕತೆಗಳನ್ನು ಓದುವ ಮೂಲಕ ಕನ್ನಡಕ್ಕೆ ಭರವಸೆಯ ಕತೆಗಾರ್ತಿಯೊಬ್ಬರನ್ನು ಬರಮಾಡಿಕೊಳ್ಳಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

About the Author

ಯಶಸ್ವಿನಿ ಕದ್ರಿ

ಲೇಖಕಿ ಯಶಸ್ವಿನಿ ಕದ್ರಿ ಅವರು ಮೂಲತಃ ಮಂಗಳೂರಿನವರು. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವನಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಕಥೆಗಳು ಉದಯವಾಣಿ, ಕನ್ನಡ ಪ್ರಭ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ಜೀವನದ ಕುರಿತಾದ ಲೇಖನಗಳು ಕಾಲೇಜು ಕಾಲಮ್ ಅಂಕಣದ ಮೂಲಕ ಉದಯವಾಣಿಯಲ್ಲಿ ಪ್ರಕಟಗೊಂಡಿವೆ. ಪ್ರಶಸ್ತಿಗಳು: ಅ.ನ.ಕೃ. ಕಥಾ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಈ ಹೊತ್ತಿಗೆ ಕಥಾ ಪ್ರಶಸ್ತಿ, ಅಬಚೂರಿನ ಮಿತ್ರ ವೃಂದದ ಕಥಾ ಪ್ರಶಸ್ತಿ. ಕೃತಿಗಳು: ಊರು ಹೇಳದ ...

READ MORE

Related Books