ಹೆಣ್ಣೆಂದರೆ..?

Author : ಶಿವರಾಮ ಅಸುಂಡಿ

Pages 120

₹ 100.00




Year of Publication: 2013
Published by: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
Phone: 9448102158

Synopsys

ಹೆಣ್ಣೆಂದರೆ ಶಿವರಾಮ ಅಸುಂಡಿ ಅವರ ಮೊದಲ ಕಥಾ ಸಂಕಲನ. 10 ಕಥೆಗಳನ್ನೊಳಗೊಂಡಿದೆ. ಗಿಫ್ಟ್, ಹೆಣ್ಣೆಂದರೆ, ಒಂದು ಹೆಣದ ಸುತ್ತ, ಈ ಸಾವು ನ್ಯಾಯವೆ, ಟಿಕೇಟ್.. ಟಿಕೇಟ್..ಕೋರಿಯರ್, ಸಂಗಯ್ಯನ ಸೈಕಲ್ ಪ್ರಸಂಗ, ಸಾವಿನ ವ್ಯಾಪಾರ, ಅವರ್ನ್ ಬಿಟ್ಟ್.. ಇವರ್ನ್ ಬಿಟ್ಟ್...., ಗುಜರಿ ಕಥೆಗಳನ್ನೊಳಗೊಂಡಿದೆ. ಹೆರುವ ಯಂತ್ರವಾಗಿ ಮಾರ್ಪಟ್ಟ ಹೆಣ್ಣು ಮತ್ತೆ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಸಮಾಜದಲ್ಲಿ ಅನುಭವಿಸುವ ಯಾತನೆ, ಲಂಗಾಣಿ ತಾಂಡಾಗಳಲ್ಲಿ ನಡೆದ ಹೆಣ್ಮಣು ಕ್ಕಳ ಮಾರಾಟ ಇತ್ಯಾದಿಗಳನ್ನು ಹೆಣ್ಣಂದರೆ ಮಾರ್ಮಿಕವಾಗಿ ಬಿಂಬಿಸಿದೆ. ಗುಜರಿ ಕಥೆ ಗುಜ್ಜರ್ ಕಿ ಶಾದಿ ಮೇಲೆ ಕೇಂದ್ರೀಕೃತಗೊಂಡಿದ್ದರೆ, ಈ ಸಾವು ನ್ಯಾಯವೇ ರೈತ ಸಮುದಾಯದ ಸಂಕಷ್ಟಗಳ ಸರಮಾಲೆಗಳನ್ನು ಬಿಂಬಿಸುತ್ತದೆ. ಟಿಕೇಟ್.. ಟಿಕೇಟ್.. ಅಮಾಯಕನೊಬ್ಬನ ದುರಂತ ಅಂತ್ಯ ತೋರಿಸುತ್ತದೆ. ಇತರೆ ಕಥೆಗಳೂ ವಿವಿಧ ಸಂಗತಿಗಳ ಮೇಲೆ ಬೆಳಕು ಚೆಲುತ್ತಿದ್ದು, ಹೆಣ್ಣೆಂದರೆ ಕೃತಿಗೆ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books