ಇಲ್ಲಿಯ ಕತೆಗಳು ಹೆಣ್ಣಿನ ಅಸ್ಮಿತೆಯನ್ನು ಸಾರುತ್ತವೆ. ಕೌಟುಂಬಿಕ ಜಗತ್ತಿನಲ್ಲಿ ಬಂಧಿಯಾಗದೆ ಸಂಸಾರದ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ದಿಟ್ಟ ಮಹಿಳೆಯರು ಕಥೆಯಲ್ಲಿ ಮುಖಾಮುಖಿಯಾಗುತ್ತಾರೆ. ಸಮಾಜ ಶೋಷಣೆಯಿಂದ ಮುಕ್ತರಾಗಲು ದಿಟ ನಿರ್ಧಾರ ಕೈಗೊಂಡು ಮಾದರಿಯಾಗುವಂತಹ ಪಾತ್ರಗಳು ‘ಪಂಚಮಿ'ಯ ನಾಯಕಿಯರಾದ ಮಂದಾಕಿನಿ, ಅನುರಾಧ, ಕಾವೇರಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ತನ್ನದಲ್ಲದ ತಪ್ಪಿಗೆ ದುಃಖ, ಸಂಕಟ, ನೋವುಗಳನ್ನು ಅನುಭವಿಸಬೇಕಾಗಿ ಬಂದಿದ್ದರೂ, ಒಂಟಿಯಾಗಿಯೇ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಮಾಜಮುಖಿಯಾಗಿ ಬೆಳೆಯುವ ಪಾತ್ರವು ಸ್ರೀ ಲೋಕಕ್ಕೊಂದು ಮಾದರಿ.
ಲೇಖಕಿ ಮತ್ತು ಕವಯತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಸಾಹಿತ್ಯ ಯಾನ ಶುರುವಾಗಿದ್ದು ಇತ್ತಿಚಿನ ದಿನಗಳಲ್ಲಿ. ಅವರ ಮೊದಲ ಕೃತಿ, 2016 ಅಂತರಂಗದ ಭಾವನೆಗಳ `ಸಂವೇದನೆ’ ಕೃತಿ ಪ್ರಕಟವಾಯಿತು. ಬಸವನ ಬಾಗೇವಾಡಿಯಲ್ಲಿ ಕಳೆದ 2017ರ ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ, ಧಾರವಾಡದ ಚೆನ್ನಮ್ಮ ಪುಸ್ತಕ ಪ್ರಶಸ್ತಿ ದೊರೆತಿದೆ. 2019 ರ ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ ದೊರೆತಿದೆ. ‘ನವಮಿ’ ಅವರ ಕಥಾಸಂಕಲನ, ‘ಗಂಧದೋಕುಳಿ’, ‘ಸಾಗರವ ಗೆದ್ದವಳು’ ಕವನ ಸಂಕಲನ. ಪಂಚಮಿ ಹಾಗೂ ಪ್ರೀತಿಯ ಪಂಚಗವ್ಯ ಕೃತಿಗಳು 2019ರಲ್ಲಿ ಪ್ರಕಟವಾಗಿವೆ. ಕನ್ನಡ ವಚನ ಸಾಹಿತ್ಯ ಪರಿಷತ್ತು ವತಿಯಿಂದ ...
READ MORE