ಭುಜಂಗಯ್ಯನ ದಶಾವತಾರಗಳು

Author : ಶ್ರೀಕೃಷ್ಣ ಆಲನಹಳ್ಳಿ

Pages 528

₹ 350.00




Year of Publication: 1985
Published by: ಕನ್ನಡ ಸಂಸ್ಕೃತಿ ಇಲಾಖೆ
Address: ನೃಪತುಂಗ ರಸ್ತೆ,ಕನ್ನಡ ಭವನ,ಬೆಂಗಳೂರು -560002

Synopsys

ಕಥಾನಾಯಕ ಭುಜಂಗಯ್ಯ ಮೈಸೂರು ಸಮೀಪದ ಮಾದ ಹಳ್ಳಿಯ ರೈತ. ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಾ ಜೀವನವನ್ನು ನಡೆಸುವ ಕೃಷಿಕ. ತಾನು ದುಡಿದು ಜೀವಿಸಿ, ತನ್ನ ಹಳ್ಳಿಯ ಇತರರಿಗೂ ದುಡಿದು ಜೀವಿಸಲು ಪ್ರೋತ್ಸಾಹ ಸಹಕಾರ ಕೊಡುತ್ತ ಹಲವಾರು ವೃತ್ತಿಗಳಲ್ಲಿ ನಿಪುಣನಾಗಿರುವ, ಇತರರ ಕಷ್ಟಕ್ಕೆ ಮರುಗುತ್ತಾ ನೆರವಾಗುತ್ತಾ,ತಾಯಿ ಮಡದಿ ಮಕ್ಕಳನ್ನು ಪ್ರೀತಿಸುತ್ತಾ ಜೀವಿಸುವಾತ ಮಡದಿ ಶ್ರೀಮಂತ ಮನೆತನದ ಮಗಳಾದ ಪಾರ್ವತಿ ಘಟವಾಣಿ ಸ್ತ್ರೀ. ಆಕೆಗೆ ಪತಿಯ ಸಹವಾಸಗಳು ಚರ್ಯೆ ಗಳು ಯಾವುದೂ ಸಹ್ಯವಲ್ಲ. ಭುಜಂಗಯ್ಯನ ಹಳ್ಳಿಯಲ್ಲಿ ಮಳೆ ಇಲ್ಲದೆ ಬರ ಬಂದಾಗ ಆತನೂರಿನ ಬಡ ಕೂಲಿಕಾರರು ವಲಸೆ ಹೋಗುವುದು ಅರಿತ ಆ ಊರಿನ ಕರಿಗೌಡ ಆತನಲ್ಲಿದ್ದ ಧವಸ ಗಳನ್ನು ನೀಡಿ ಸಹಾಯ ಮಾಡುತ್ತಾ ಬದುಕುವ ಭರವಸೆಯನ್ನು ತುಂಬುತ್ತಾನೆ. ಇಂತಹ ಕಾರ್ಯಗಳೆಲ್ಲವೂ ಕರಿ ಗೌಡರ ಹಿರಿ ಮಗನಾರಾಯಣನಿಗೆ ಹಿತವಲ್ಲ. ಆ ಊರಿಗೆ ಬರುತ್ತಿದ್ದ ಬಸ್ಸಿನ ಡ್ರೈವರ್ನ ಮಾತಿನಿಂದ ಭುಜಂಗಯ್ಯ ಸ್ಪೂರ್ತಿ ಹೊಂದಿ ಕರಿ ಗೌಡ ರಿಂದ ಸಾಲ ಪಡೆದು ಹೋಟೆಲ್ ತೆರೆದು ನಡೆಸಿ ಯಶಸ್ವಿಯಾಗುವುದರಿಂದ ದೊರೆತ ಹಣದಿಂದ ಗಂಜಿ ಕೇಂದ್ರ ಸ್ಥಾಪಿಸಿ ವಲಸೆ ಹೋಗುವ ಊರಿನ ಬಡವರಿಗೆ ಉಚಿತವಾಗಿ ಆಹಾರವನ್ನು ಪೂರೈಸುತ್ತಾನೆ. ಜೊತೆಗೆ ಊರವರನ್ನು ಸೇರಿಸಿಕೊಂಡು ನಾಟಕವನ್ನು ಮಾಡಿ ಹಣ ಸಂಗ್ರಹಿಸಿ ಅವರಿಗೆ ಸಹಾಯ ಮಾಡುತ್ತಾನೆ. ಇದೆಲ್ಲವೂ ಆ ಊರಿನ ಪಟೇಲ ಶ್ಯಾನುಬೋಗರಿಗೂ ಅವರ ಚೀಲಗಳಿಗೂ ಅಸೂಯೆಯನ್ನುಂಟು ಮಾಡುತ್ತದೆ.

About the Author

ಶ್ರೀಕೃಷ್ಣ ಆಲನಹಳ್ಳಿ
(03 April 1947 - 04 January 1989)

ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಅವರು ಜನಿಸಿದ್ದು  1947ರ ಏಪ್ರಿಲ್ 3ರಂದು. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದ ಶ್ರೀಕೃಷ್ಣ ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಇವರು ಪ್ರಮುಖರು. ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಶ್ರೀಕೃಷ್ಣ ಅವರು ನಗರೀಕರಣ ಮತ್ತು ಆಧುನಿಕ ಆರ್ಥಿಕತೆಯ ಸ್ಪರ್ಶಕ್ಕೆ ಸಿಕ್ಕ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಅತ್ಯಂತ ಸಹಜ ರೀತಿಯಲ್ಲಿ ತಮ್ಮ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಶ್ರೀಕೃಷ್ಣ ಅವರ ಕೃತಿಗಳು: ಮಣ್ಣಿನ ಹಾಡು, ಕಾಡುಗಿಡದ ಹಾಡು-ಪಾಡು, ಪ್ರಕಟಿಸಲಾಗದ ಪದ್ಯಗಳು, ಡೋಗ್ರಾ ಪಹಾಡಿ ಗೀತೆಗಳು (ಕವನ ಸಂಕಲನಗಳು). ತಪ್ತ, ಫೀನಿಕ್ಸ್ (ಕಥಾ ಸಂಕಲನಗಳು), ಕಾಡು, ಪರಸಂಗದು ...

READ MORE

Related Books