ತಿಪ್ಪೆಯನರಸಿ ಮತ್ತು ಇತರ ಕಥೆಗಳು

Author : ಕೆ. ನೀಲಾ

Pages 92

₹ 80.00




Year of Publication: 2010
Published by: ಕನ್ನಡನಾಡು ಪ್ರಕಾಶನ
Address: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ಗುಲಬರ್ಗಾ

Synopsys

‘ತಿಪ್ಪೆಯನರಸಿ ಮತ್ತು ಇತರ ಕಥೆಗಳು’ ಲೇಖಕಿ ಕೆ. ನೀಲಾ ಅವರ ಸಣ್ಣಕತೆಗಳ ಸಂಕಲನ. ಹೋರಾಟಗಾರ್ತಿ ಕೆ. ನೀಲಾ ಅವರ ಕತೆಗಳು ಸಾಮಾಜಿಕ ಪಾರುಪತ್ಯ, ಶೋಷಣೆ, ಸ್ತ್ರೀಸಂವೇದನೆಗಳನ್ನು ಗಾಢವಾಗಿ ಶೋಧಿಸುತ್ತವೆ. ಇಂತಹ ಜಟಿಲ ವಿಷಯಗಳು ಕೂಡ ಅವರ ಕತೆಗಳಲ್ಲಿ ಕಲೆಗಳಾಗಿ ಅರಳುತ್ತಿರುವುದು ವಿಶೇಷ. ಏಕೆಂದರೆ ಸಾಮಾಜಿಕ ನ್ಯಾಯವನ್ನು ಸಾಹಿತ್ಯದಲ್ಲಿ ತಂದು ಅದನ್ನು ಸುಂದರ ಕಲೆಯಾಗಿಸೋದು ಕಷ್ಟದ ಕೆಲಸ. ಆದರೆ ಇಲ್ಲಿಯ ಕತೆಗಳಲ್ಲಿ ಅದು ಸಾಧ್ಯವಾಗಿದೆ.

About the Author

ಕೆ. ನೀಲಾ
(01 August 1966)

ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ...

READ MORE

Related Books