ಅಪೂರ್ಣ ಸತ್ಯ

Author : ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ

Pages 184

₹ 130.00
Year of Publication: 2019
Published by: ಯುಗಪುರುಷ ಪ್ರಕಟಣಾಲಯ
Address: ಕಿನ್ನಿಗೋಳಿ, ದಕ್ಷಿಣ ಕನ್ನಡ ಜಿಲ್ಲೆ.
Phone: 08242295423

Synopsys

ಲೇಖಕ ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ ಅವರ ‘ಅಪೂರ್ಣಸತ್ಯ’ ಕಥಾಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಒಂದೊಂದು ಕತೆಯು ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ. ‘ಅಪೂರ್ಣಸತ್ಯ’ ಕಥೆಗೆ ಸಿಂಗಾಪುರ ಕನ್ನಡ ಸಂಘದಿಂದ ಕಥಾಸ್ವರ್ಧೆಯಲ್ಲಿ ಮೊದಲ ಬಹುಮಾನ ಹಾಗೂ “ದೇವರಗಿಡ” ಕಥೆಗೆ ಭಾರತೀಯ ಕರ್ನಾಟಕ ಸಂಘ ನಡೆಸಿದ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬಂದಿದೆ. ಇನ್ನಿತರ ಕಥೆಗಳು ನಾಡಿನ ತರಂಗ ಹಾಗೂ ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾಗಿವೆ.

About the Author

ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ
(13 December 1969)

ಕತೆಗಾರ ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ ಅವರು (ಜನನ: 1969 ಡಿಸೆಂಬರ್‌ 13) ಮಂಜೇಶ್ವರದ ಕೊಡ್ಲಮೊಗರುದವರು. ಕೊಡ್ಲಮೊಗರು ಹಾಗೂ ಮಂಗಳೂರಿನಲ್ಲಿ ಶಿಕ್ಷಣ ಪಡೆದು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಅಂತಾಷ್ಟ್ರೀಯ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪೂರ್ಣಸತ್ಯ, ಮದನಿಕೆ ಹಾಗೂ ಹಾಂಟೆಂಡ್‌ ಹೊಸಮನೆ ಇವರ ಕೃತಿಗಳು. ...

READ MORE

Related Books