ಕಥಾಭರಣ

Author : ಅಜಿತ್ ಹರೀಶಿ

Pages 236

₹ 290.00




Year of Publication: 2022
Published by: ಸಾಹಿತ್ಯ ಲೋಕ ಪಬ್ಲಿಕೇಷನ್ಸ್
Address: #725, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560 010
Phone: 9945939436

Synopsys

ಲೇಖಕ ಡಾ. ಅಜಿತ್‌ ಹರೀಶಿ ಹಾಗೂ ವಿಠಲ್‌ ಶೆಣೈ ಅವರು ಸಂಪಾದಿಸಿರುವ ಕಥಾಸಂಕಲನ ಕೃತಿ ʻಕಥಾಭರಣ- ವಿಭಿನ್ನ ಭಾವಗಳ ಹೂರಣʼ. ಪುಸ್ತಕದ ಮುನ್ನುಡಿಯಲ್ಲಿ ಸಾಹಿತಿ ವಿವೇಕಾನಂದ ಕಾಮತ್ ಅವರು, “ಇದು ನವ್ಯ ಕಾಲದ ಬರಹಗಾರರ ಕಥಾಸಂಕಲನ ‘ಕಥಾಭರಣ’. ಪ್ರತಿಯೊಂದು ಆಭರಣದ ಹಿಂದೆಯೂ ಒಂದೊಂದು ಅನನ್ಯತೆ ಇರುತ್ತದೆ. ಅದು ಧರಿಸುವವರ ಮನವನ್ನು ಮುದಗೊಳಿಸುತ್ತದೆ. ಹಾಗೆಯೇ ಇಲ್ಲಿನ ಸಂಕಲನದ ಕಥೆಗಳಲ್ಲಿ ಇಪ್ಪತ್ತೆಂಟು ಈಗಿನ ತಲೆಮಾರಿನ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ನಿಚ್ಚಳವಾಗಿ ಮೂಡಿಸಿರುವ ಇಪ್ಪತ್ತೆಂಟು ಕಥೆಗಾರ / ರ್ಥಿಯರ ಕಥೆಗಳಿವೆ. ಹಸಿದವನ ಮುಂದೆ ಒಂದು ಬಾಳೆ ಎಲೆಯಲ್ಲಿ ಹಲವು ಬಗೆಯ, ರುಚಿಯ ಭಕ್ಷ್ಯಗಳನ್ನು ಬಡಿಸಿದಾಗ ಆತ ಸಂತೃಪ್ತಿಯಿಂದ ಉಂಡು ಎದ್ದಂತ ಭಾವ ಇಲ್ಲಿನ ಕಥೆಗಳನ್ನು ಓದಿ ಮುಗಿಸಿದಾಗ ಮೂಡುತ್ತದೆ. ಈ ಕಥಾ ಸಂಕಲನವನ್ನು ಅವಲೋಕಿಸಿದಾಗ, ಒಂದು ರೂಢಿಗತ ಹಂದರದ ಹಂಗಿಲ್ಲದೇ ತಮ್ಮದೇ ಆದ ಜಾಡನ್ನು ಲೇಖಕ/ಕಿಯರು ಕಂಡುಕೊಂಡಿದ್ದು ಇಲ್ಲಿನ ಬಹುತೇಕ ಕತೆಗಳಲ್ಲಿ ಎದ್ದು ಕಾಣುವ ಅಂಶವಾಗಿದೆ. ಹಾಗಾಗಿ ಮುಂದಿನ ತಲೆಮಾರಿನ ಕಥಾ ಜಗತ್ತು ಈ ಲೇಖಕ/ಕಿಯರ ಪೋಷಣೆಯಲ್ಲಿ ಉಜ್ವಲವಾಗಿದೆ ಎಂಬ ಭರವಸೆ ಈ ಸಂಕಲನ ನೀಡುತ್ತದೆ” ಎಂದು ಹೇಳಿದ್ದಾರೆ.

About the Author

ಅಜಿತ್ ಹರೀಶಿ
(24 August 1978)

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು.  ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...

READ MORE

Related Books