ಕೌನ್ಸೆಲಿಂಗ್ ಕತೆಗಳು

Author : ಅಶ್ವಿನಿ ರಾಮಾನುಜಂ

Pages 126

₹ 130.00
Year of Publication: 2021
Published by: ಮೈತ್ರಿ ಪ್ರಕಾಶನ
Address: # 504, 2 ನೇ ಕ್ರಾಸ್, 2ನೇ ಬ್ಲಾಕ್,  ಬಿಎಸ್ಕೆ ಮೊದಲ ಹಂತ ಬೆಂಗಳೂರು-560050
Phone: 8317396164

Synopsys

ಲೇಖಕಿ ಅಶ್ವಿನಿ ರಾಮಾನುಜಂ ಅವರ ಕತಾ ಸಂಕಲನ ‘ಕೌನ್ಸೆಲಿಂಗ್ ಕತೆಗಳು’. ಈ ಕೃತಿಯು ಅಮ್ಮಾ! ಗುಮ್ಮ ಬಂದ, ಗುಪ್ತಗಾಮಿನಿ, ಕೆಟ್ಟ ಮೇಲೆ ಬುದ್ಧಿ ಬಂತು, ಅತಿಯಾದ ಅಮೃತ ವಿಷ, ಅಂತಗಾರ್ಮಿ, ಕವಲುದಾರಿ, ಹೂ ಮನಸು, ನೀಲಾಂಬರಿ, ದ್ವಂದ್ವ: ಕತೆ 1, ದ್ವಂದ್ವ : ಕತೆ 2 ಶೀರ್ಷಿಕೆಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದ ಡಾ. ಆನಂದ ಪಾಂಡುರಂಗಿ, ‘ಇಲ್ಲಿ ಬರುವ ಪ್ರತಿಯೊಂದು ಕಥೆಯಲ್ಲಿ ವಿಷಯ ವೈವಿಧ್ಯತೆ, ಭಿನ್ನತೆ ಹಾಗೂ ವಿಶಿಷ್ಟತೆ ಇದೆ. ಕೇವಲ ಒಂದು ವರ್ಗ, ಅಂದರೆ ಮಕ್ಕಳು, ಯುವಕರು ಅಥವಾ ಹಿರಿಯರ ಪ್ರಕರಣಗಳಿಗೆ ಸೀಮಿತವಾಗದೇ, ಎಲ್ಲ ಹಂತದ ಜನರ ಮಾನಸಿಕ ತುಮುಲಗಳ ಅನಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಕಥೆಯ ಮೂಲಕ ಸಮಾಜಕ್ಕೆ ಎಚ್ಚರಿಕೆ ಇದೆ. ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಸಲಹೆಯೂ ಇದೆ. ಹಿರಿಯರು ಅಥವಾ ಪಾಲಕರು ತಿಳಿಯದೇ ಮಕ್ಕಳ ಮೇಲೆ ಹೇರುವ ನಿರ್ಬಂಧ ಅಥವಾ ಒತ್ತಡವಿರಬಹುದು, ಯೌವ್ವನಾವಸ್ಥೆಯಲ್ಲಿ ಯುವಕ ಅಥವಾ ಯುವತಿ ಯಾವುದೋ ಮೋಹಕ್ಕೆ ಒಳಗಾಗಿ ನಂತರ ತಾನು ಮಾಡಿದ್ದು ತಪ್ಪು ಎನಿಸಿ ಅನುಭವಿಸಿದ ಸಂಕಷ್ಟಗಳ ಬಗ್ಗೆ ಸೇರಿದಂತೆ ಹಲವು ವಿಷಯಗಳ ಪ್ರಕರಣಗಳನ್ನು ಇಲ್ಲಿ ಒನ್ ಟು ಒನ್ ಸಂಭಾಷಣೆ ಮೂಲಕ ಜನರಿಗೆ ಮನದಟ್ಟಾಗುವಂತೆ ಬರೆಯುವಲ್ಲಿ ಲೇಖಕಿ ಅಶ್ವಿನಿ ರಾಮಾನುಜಂ ಯಶಸ್ವಿಯಾಗಿದ್ದಾರೆ.’ ಎಂದು ಪ್ರಶಂಸಿದ್ದಾರೆ.

 

About the Author

ಅಶ್ವಿನಿ ರಾಮಾನುಜಂ

ಲೇಖಕಿ ಅಶ್ವಿನಿ ರಾಮಾನುಜಂ ಅವರು ಆಪ್ತಸಲಹಾ ಮನಶಾಸ್ತೃಜ್ಞೆ. ಇವರು ಮೂಲತಃ ಬೆಂಗಳೂರಿನವರು. ತಂದೆ ಮನೋಹರನ್  ತಾಯಿ ಬೃಂದಾ ಮನೋಹರನ್. ಬೆಂಗಳೂರು ವಿಶ್ವವಿದ್ಯಾಲಯದಿಂದ ಕೌನ್ಸೆಲಿಂಗ್ ಸೈಕಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆ. ಸುಮಾರು ಎರಡು ವರ್ಷಗಳ ಕಾಲ ಬೆಂಗಳೂರಿನ ಬಸವನಗುಡಿಯ ಪ್ರಸನ್ನ ಕೌನ್ಸೆಲಿಂಗ್ ಸೆಂಟರ್ ನಲ್ಲಿ ಪ್ರಾಯೋಗಿಕ ಅನುಭವವಿದೆ. ಕಳೆದ 15 ವರ್ಷಗಳಿಂದ ಮಕ್ಕಳ, ಹದಿಹರೆಯದವರ ಕೌಟುಂಬಿಕ ಆಪ್ತಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರಹಗಾರ್ತಿ ಸಹ. ಅನೇಕ ಕಥೆ, ಕವನಗಳನ್ನು ರಚಿಸಿದ್ದಾರೆ. ಅನುಭವ ಮತ್ತು ಸಂಶೋಧನೆಯ ಆಧಾರದ ಮೇಲೆ, ಅನೇಕ ಮಾನಸಿಕ ಸಮಸ್ಯೆಗಳ ಮೂಲ ಮತ್ತು ಅದರಿಂದ ಹೊರಬರುವ ದಾರಿಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಕಥಾಸ್ವರೂಪ ನೀಡಿ, `ಕೌನ್ಸೆಲಿಂಗ ...

READ MORE

Related Books