ಹಸಿವು

Author : ಶಿವರಾಮ ಕಾರಂತ

Pages 60

₹ 75.00
Year of Publication: 2018
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 9449886390

Synopsys

ಜೀವನದ ಕೆಲವೊಂದು ಅನುಭವಗಳು ನನ್ನನ್ನು ಕಾಡುತ್ತಿರಲು, ಅವುಗಳಿಗೊಂದು ರೂಪವನ್ನು ಕೊಟ್ಟು ಹೊರಗಿಡಲು ಯತ್ನಿಸಿರುವೆ. ದಾರಿದ್ರದ ಭಿನ್ನ ಭಿನ್ನ ಚಿತ್ರಗಳನ್ನು ಕಂಡ ನಾನು, ಅವುಗಳಿಗೆ ಚಿಕ್ಕ ಕಥೆಯೇ ಯುಕ್ತ ವಾಹಕವೆಂದು ನಂಬಿ, ಈ ರೀತಿಯಿಂದ ಹತ್ತು ಕಥೆಗಳ ಹೂಸರವನ್ನು ಕಟ್ಟಿರುವೆ. ಕಥೆಯು ಹೂಸರವಾದರೂ, ಕಥಾವಿಷಯಗಳು ಮಾತ್ರ, ಮಸಣವೊಂದರಲ್ಲಿನ ಹತ್ತು ಸಮಾಧಿಗಳಂತಿವೆ! ಅದರಲ್ಲಿನ ವಿಚಿತ್ರ ಸತ್ಯ, ಸೊಗಸುಗಳು ಓದುಗರಿಗೂ ಕಾಣಿಸಿದರೆ, ನನ್ನ ಕೃತಿಯು ಸಾರ್ಥಕವಾಯಿತೆಂದು ತಿಳಿಯುವೆನು ಎನ್ನುತ್ತಾರೆ ಶಿವರಾಮ ಕಾರಂತ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books