ಒಳ್ಳೆಯವನು (ಕಥಾ ಸಂಕಲನ)

Author : ಅಶೋಕ ಹೆಗಡೆ

Pages 104

₹ 60.00
Published by: ಅಕ್ಷರ ಪ್ರಕಾಶನ
Address:  ಹೆಗ್ಗೋಡು, ತಾ: ಸಾಗರ, ಜಿಲ್ಲೆ: ಶಿವಮೊಗ್ಗ 

Synopsys

ʼಒಳ್ಳೆಯವನುʼ ಕಥಾಸಂಕಲನವು ಲೇಖಕ ಅಶೋಕ ಹೆಗಡೆಯವರು ರಚಿಸಿದ್ದು ಕನ್ನಡದ ಸಣ್ಣಕತೆಗಳ ಇತ್ತೀಚಿನ ನಿಲುವು ಒಲವುಗಳ ಸುತ್ತ ಈ ಕೃತಿಯು ಹೆಣೆದುಕೊಂಡಿದೆ. ಇಲ್ಲಿ ಲೇಖಕರ ಸೂಕ್ಷ್ಮ ನಿರೂಪಕ ದೃಷ್ಟಿಯ ಹರಹು ವ್ಯಾಪ್ತಿಗಳು ಕಾಣಿಸುವುದರೊಂದಿಗೇ ಅದ್ಬುತವಾದ ಕೆಲವು ಬಿಂಬಗಳನ್ನು ನೀಡುವ ಪ್ಯಾರಾಗಳು ಕತೆಗಳ ಕಾಳಜಿ, ಆಸಕ್ತಿಗಳ ಮಿತಿಗಳನ್ನೂ ತೆರೆದು ತೋರುವಂತಿದೆ. ಕಥೆಯ ಚೌಕಟ್ಟು ಎಲ್ಲೂ ಕೃತಕ ಎನಿಸದಷ್ಟು ಸಹಜವಾಗಿ ಅನಾವರಣಗೊಳ್ಳುತ್ತ ಹೋಗುತ್ತದೆ. ಕಥನವೂ ಸ್ವತಂತ್ರವಾಗಿಯೇ ಗಟ್ಟಿಯಾಗಿದೆ ಮತ್ತು ಎಲ್ಲ  ಅಂಶಗಳನ್ನು ಗೌಣಗೊಳಿಸುವಷ್ಟು ಸ್ವಯಂಶಕ್ತವಾಗಿದೆ. ಹಾಗಾಗಿ, ಕೃತಿಯು ಲೇಖಕರ  ಪ್ರತಿಭೆಯ ಕೇಂದ್ರೀಕೃತ ಅಭಿವ್ಯಕ್ತಿ ಎಂದೇ ಹೇಳಬಹುದಾದಷ್ಟು ಸಾಮಗ್ರಿಯನ್ನು ಹೊಂದಿದೆ.ಬಆಧುನಿಕ ಮನುಷ್ಯನ ಅಂತರಾಳ ತಡಕುವ ಸ್ಪಷ್ಟ ಉದ್ದೇಶವನ್ನು ಲೇಖಕರು ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ.

 

About the Author

ಅಶೋಕ ಹೆಗಡೆ
(22 July 1967)

ಕವಿ ಕಾದಂಬರಿಕಾರ ಅಶೋಕ ಹೆಗಡೆ  22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು ...

READ MORE

Related Books