ಅಲ್ಲಾಭಕ್ಷಿ ಮತ್ತು ಅವನ ನಾಯಿ

Author : ಕಂನಾಡಿಗಾ ನಾರಾಯಣ

Pages 296

₹ 200.00




Year of Publication: 2015
Published by: ಕಣ್ವ ಪ್ರಕಾಶನ
Address: ನಂ.11/26, 10 ನೇ 'ಡಿ' ಕ್ರಾಸ್ 2 ನೇ ಹಂತ, ಮಹಾಲಕ್ಷ್ಮಿಪುರಂ, ಬೆಂಗಳೂರು -560086
Phone: 08023426778

Synopsys

ಲೇಖಕ ಕಂನಾಡಿಗಾ ನಾರಾಯಣ ಅವರ ಆಯ್ದ ಕಥೆಗಳ ಸಂಗ್ರಹ ಕೃತಿ-ಅಲ್ಲಾಭಕ್ಷಿ ಮತ್ತು ಅವನ ನಾಯಿ. ತುಂಗೆಯ ನೆಲದ ಆಸುಪಾಸಿನ ಭಾಷೆಯ ಸೊಗಡು, ಅಲ್ಲಿನವರ ಜನ ಜೀವನ ವಿಧಾನ ಕಟ್ಟುವ ರೀತಿ ವಿಶಿಷ್ಟವಾಗಿದೆ. ಮಲೆನಾಡಿನ ಸೆರಗಿನ ಜೀವನ ವಿಧಾನದ ಎಳೆಎಳೆಗಳೂ ಅವರ ಕಥೆಯ ವಿವರಗಳಲ್ಲಿ ತುಂಬ ವಾಸ್ತವವಾಗಿ ಮೂಡಿಬಂದಿವೆ. ಈ ಸಂಕಲನದ 'ಅಲ್ಲಾಭಕ್ಷಿ ಮತ್ತು ಅವನ ನಾಯಿ'ಯಂಥ ಕಥೆ ಕನ್ನಡದ ಅತ್ಯುತ್ತಮ ಕಥೆಗಳ ಸಾಲಿನಲ್ಲಿ ನಿಲ್ಲುವಷ್ಟು ಎದೆಗಾರಿಕೆಯನ್ನು ಪ್ರದರ್ಶಿಸುತ್ತದೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books