ಹಸಿರು ಕಣ್ಣಿನ ಹುಡುಗಿ

Author : ಕಂನಾಡಿಗಾ ನಾರಾಯಣ

Pages 100

₹ 50.00




Year of Publication: 2010
Published by: ಕಂನಾ ಪುಸ್ತಕ
Address: ‘ಸೃಜನಾ’, 3 ನೇ ಕ್ರಾಸ್, ಹೆಸರಘಟ್ಟ ಮುಖ್ಯ ರಸ್ತೆ, 8 ನೇ ಮೈಲಿ, ದಾಸರಹಳ್ಳಿ ಬೆಂಗಳೂರು- 560057
Phone: 9880220505

Synopsys

ಸಮಾಜದ ವಾಸ್ತವ ಸನ್ನಿವೇಶವನ್ನು ವ್ಯಂಗ್ಯದ ಮೂಲಕವೇ ಪಾತ್ರದ 'ತಲ್ಲಣ’ವನ್ನು ತಮ್ಮ ಕಥೆಗಳಲ್ಲಿ ಚಿತ್ರಿಸಿದ್ದಾರೆ ಲೇಖಕ ಕಂನಾಡಿಗಾ ನಾರಾಯಣ.  ಮನುಷ್ಯ ಸ್ವಭಾವದ ಆಂತರಿಕ ರಾಜಕಾರಣ ಮತ್ತು ಅಲ್ಲಿಯ ದ್ವಂದ್ವಗಳಿಗೆ ಪಾತ್ರಗಳ ಮೂಲಕ ಮುಖಾಮುಖಿಯಾಗಿಸುತ್ತಾರೆ. ಕಂಪಾಲಯ್ಯನ 'ಪ್ರತಿಮೆ', ನಾಟಕದ ಮನುಷ್ಯನ 'ಕೊಡೆ', ಅಲ್ಲಾಭಕ್ಷಿಯ 'ನಾಯಿ', ಕಂಡಪ್ಪನ 'ಎಮ್ಮೆ', ಕಾಲಜ್ಜನ 'ಕನ್ನಡಿ' ನಮ್ಮನ್ನು ಕಾಡುತ್ತಲೇ ಪ್ರಶ್ನಿಸುತ್ತಿರುತ್ತವೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books