‘ಗಲ್ಲುಗಂಬದ ಆತಂಕದಲ್ಲಿ’ ಲೇಖಕ ಡಿ.ವಿ. ಗುರುಪ್ರಸಾದ್ ಅವರ ಕತಾಸಂಕಲನ. ಮರಣದಂಡನೆಗೀಡಾದ ಕೈದಿಗಳ ಕಥೆಗಳಿವೆ. ವಿರಳದಲ್ಲಿ ವಿರಳವಾದ ಮರಣದಂಡನೆಯ ಶಿಕ್ಷೆಯು ಸಿಗಬೇಕಾದಲ್ಲಿ ಅಪರಾಧಿಯು ನಡೆಸಿದ ಕೃತ್ಯ ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿ, ಅಪರಾಧಿಯ ವಿಕೃತಿಯನ್ನು ಸಾರಬೇಕು. ಇಂತಹ ಹಲವು ಘೋರ ಅಪರಾಧಗಳ ಗುಚ್ಛವೇ ನಿವೃತ್ತ ಪೊಲೀಸ್ ಅಧಿಕಾರಿ ಗುರುಪ್ರಸಾದ್ ಅವರ ಈ ಕುತೂಹಲಕಾರಿ ಪುಸ್ತಕ. ಸರಣಿ ಕೊಲೆ, ಸಾಮೂಹಿಕ ಅತ್ಯಾಚಾರ, ಡಾನ್ ಗಳ ಅಟ್ಟಹಾಸ ಮುಂತಾದ ಹಲವು ಕುತೂಹಲಕರ ಘಟನೆಗಳನ್ನು ಲೇಖಕರು ಹೆಕ್ಕಿ ತೆಗೆದು ತಮ್ಮ ಟ್ರೀಡ್ ಮಾರ್ಕ್ ಸರಳ ಶೈಲಿಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.
ಬರೆಹಗಾರ ಡಿ. ವಿ. ಗುರುಪ್ರಸಾದ್ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳು. ಅವರು ರಾಜ್ಯದ ಪೋಲೀಸ್ ಗುಪ್ತಚರದಳದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳ ಅನುಭವ ಮತ್ತು ತಮ್ಮ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವ ಮೂಲಕ ಕ್ರೈಂ ಲೋಕದ ವಿಸ್ಮಯ ಸಂಗತಿಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ, ವೀರಪ್ಪನ್ : ದಂತಚೋರನ ಬೆನ್ನಟ್ಟಿ, ಕೈಗೆ ಬಂದ ತುತ್ತು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಪೊಲೀಸ್ ಎನ್ ಕೌಂಟರ್’ ಅವರ ಕಾದಂಬರಿ. ...
READ MORE'ಗಲ್ಲುಗಂಬದ ಆತಂಕದಲ್ಲಿ' ಕೃತಿಯ ಕುರಿತು ಲೇಖಕ ಡಾ.ಡಿ.ವಿ. ಗುರುಪ್ರಸಾದ್ ಅವರ ಮಾತುಗಳು