ಸಂಪೂರ್ಣ ಭಾಗವತ

Author : ಕೆ ಅನಂತರಾಮ ರಾವ್

Pages 1081

₹ 750.00




Year of Publication: 2019
Published by: ವಿದ್ಯಾ ಪಬ್ಲಿಷಿಂಗ್ ಹೌಸ್
Address: ’ ಶ್ರೀ ನಿಲಯ’ ಅಲ್ವಾರಿಸ್ ರಸ್ತೆ, ಕದ್ರಿ ಮಂಗಳೂರು-575002

Synopsys

ಲೇಖಕ ಕೆ.ಅನಂತರಾಮ ರಾವ್ ಅವರ ’ಸಂಪೂರ್ಣ ಭಾಗವತ’ ಕೃತಿಯು ಮಹಾಕಾವ್ಯವನ್ನು ಆಧರಿಸೊಇದ ಕಥೆಗಳ ಸಂಕಲನವಾಗಿದೆ. ಈ ಕೃತಿಯು ಸೃಷ್ಟಿಯ ವಿವರಣೆ, ಭಗವಂತನ ವಿರಾಟ್ ಸ್ವರೂಪ, ಕಾಲಗಣನೆ, ದ್ವೀಪಗಳ ವರ್ಣನೆ ಮತ್ತು ಮುಂದೆ ಸಂಭವಿಸಬಹುದಾದ ಭವಿಷ್ಯವಾಣಿಗಳನ್ನು ಒಳಗೊಂಡಿದೆ. ಗ್ರಂಥದ 9 ನೇ ಸ್ಕಂದದಲ್ಲಿ ರಾಮಾಯಣ ಕಥಾ ಭಾಗವಿದ್ದರೆ ದಶಮ ಸ್ಕಂದದಲ್ಲಿ ಶ್ರೀ ಕೃಷ್ಣನ ಅವತಾರದ ವಿವರಣೆ ಇದೆ. ಕಂಸನ ದರ್ಪ, ದೇವಕಿ ವಸುದೇವರ ಕಷ್ಟ ಕಾರ್ಪಣ್ಯ, ಕಾರಾಗೃಹದಲ್ಲಿ ಕೃಷ್ಣ ಜನನ, ಗೋಕುಲದಲ್ಲಿ ಬೆಳವಣಿಗೆ ಕಂಸಾದಿ ಅಸುರರನ್ನು ಲೀಲಾಜಾಲವಾಗಿ ಮರ್ದಿಸಿದ ಮತ್ತು ಗೋವರ್ಧನಗಿರಿಯ ಉದ್ಧಾರದ ಕಥೆಯನ್ನು ಒಳಗೊಂಡಿದೆ. ಗ್ರಂಥದ ಪ್ರಾರಂಭದಲ್ಲಿ ಉಲ್ಲೇಖಿಸಲ್ಪಡುವ ಭಾಗವತ ಈ ಕೃತಿಯ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ.

About the Author

ಕೆ ಅನಂತರಾಮ ರಾವ್

ಲೇಖಕ-ಕಲಾವಿದ ಕೆ. ಅನಂತರಾಮ ರಾವ್ ಭಾರತೀಯ ಜೀವವಿಮಾ ನಿಗಮದಲ್ಲಿ ಹಿರಿಯ ಪ್ರಬಂಧಕರಾಗಿ ನಿವೃತ್ತರು.  ನಾಟಕ ಹಾಗೂ ಯಕ್ಷಗಾನ ರಂಗದಲ್ಲಿ ಹೆಚ್ಚಿನ ಆಸಕ್ತಿ. ಉತ್ತಮ ವಾಗ್ಮಿಗಳು. ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. 1970 ರಲ್ಲಿ, ಯಕ್ಷಗಾನವನ್ನು ಪ್ರಪ್ರಥಮವಾಗಿ ಆಂಗ್ಲಭಾಷೆಯಲ್ಲಿ ಪ್ರದರ್ಶನ ಮಾಡಿದ ಕೀರ್ತಿ ಇವರದು.. ಕೃತಿಗಳು: ಅನಂತ ರಾಮಾಯಣ, ಯಕ್ಷಪ್ರಶ್ನೆ, ಸ್ವಾತಂತ್ರ ಸ್ವರ್ಣ ರೇಖೆ, ದಕ್ಷಿಣ ಕನ್ನಡ, ಸಂಪೂರ್ಣ ಭಾಗವತ, ಸಂಪೂರ್ಣ ಮಹಾಭಾರತ .ಅನೇಕ ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಪ್ರಶಸ್ತಿ-ಪುರಸ್ಕಾರಗಳು: 1991 ರಲ್ಲಿ, ಬೆಂಗಳೂರಿನ ಶ್ರೀ ವಿದ್ಯಾಪೀಠ ಸಂಸ್ಥೆಯು ’ ಸಮಾಜಭೂಷಣ’ ಎಂಬ ಬಿರುದು ನೀಡಿದೆ. ಅವರ ಕ್ರೀಡಾ ...

READ MORE

Related Books