ಗುದ್ದಿನಿಂದ ತೆಗೆದ ಹೆಣ

Author : ಹಾಡ್ಲಹಳ್ಳಿ ನಾಗರಾಜ್

Pages 88

₹ 8.00
Year of Publication: 1986
Published by: ಭವಾನಿ ಪ್ರಕಾಶನ
Address: 533, 14ನೇ ತಿರುವು ರಸ್ತೆ, ಕುವೆಂಪು ನಗರ, ಹಾಸನ

Synopsys

‘ಗುದ್ದಿನಿಂದ ತೆಗೆದ ಹೆಣ’ ಲೇಖಕ ಹಾಡ್ಲಹಳ್ಳಿ ನಾಗರಾಜ್ ಅವರ ಕತಾಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯನವರ ಬೆನ್ನುಡಿ ಇದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಗೆಳೆಯ ನಾಗರಾಜ್ ಅವರ ಸಾಹಿತ್ಯಿಕ ಬೆಳವಣಿಗೆಯನ್ನು ಕುರಿತು ತೀರ ನಿಕಟವಾದ ಪರಿಚಯ ನನಗಿದೆ. ಅಷ್ಟೇ ಆತ್ಮೀಯವಾಗಿ ಅವರ ಭಾವನೆ ಆಲೋಚನೆಗಳ ನಿಕಟ ಅನುಭವ ನನ್ನ ಬದುಕಿನ ಸುಕೃತ ಎನ್ನುತ್ತಾರೆ ಎಸ್. ಜಿ. ಸಿದ್ಧರಾಮಯ್ಯ. ಹಾಗೇ ಮಾನವೀಯತೆಯ ನೆಲೆಯಲ್ಲಿ ಬದುಕಿನ ಅರ್ಥ ಪೂರ್ಣತೆಗಾಗಿ ಒದ್ದಾಡುವ ಜೀವ ನಾಗರಾಜ್. ಅನ್ಯಾಯ, ಆಕ್ರಮಣ ಪ್ರವೃತ್ತಿಗಳಿಗೆ ಎಂದೂ ಸೆಡ್ಡು ಹೊಡೆದು ನಿಲ್ಲುವ ಚೈತನ್ಯ. ಆರ್ತರ ಅಳಲಿಗೆ ಕರಗುವ, ಸ್ನೇಹವಲಯದಲ್ಲಿ ವಾಚಾಳಿಯಾಗಿ ಬೆಳೆಯುವ ಈ ಮನಸ್ಸು ಗುಂಪಿನಲ್ಲಿ ಹೆಚ್ಚು ಮೌನಿ. ಈ ಎಲ್ಲ ಗುಣಗಳು ಇವರ ಬರಹ ಜೀವನದ ಜೀವರಕ್ತವಾಗಿ ಮಿಡಿದಿರುವುದು ಸಹಜ. ವಿವರಗಳನ್ನು ಪೂರ್ಣವಾಗಿ ಗ್ರಹಿಸುವ, ವ್ಯಂಜಿಸುವ ಸಹಜ ಶಕ್ತಿಯವ್ಯಂಜಿಸುವ ಸಹಜ ಶಕ್ತಿಯಿಂದ ಕಡಿದ ಇವರ ಮನೋಧರ್ಮಕ್ಕೆ ಗದ್ಯ ಅನುಕೂಲ ಮಾಧ್ಯಮವಾಗಿದೆ. ಮಲೆನಾಡ ಗ್ರಾಮೀಣ ಜೀವನದ ಅನುಭವಗಳ ಜೊತೆಗೆ ನಗರಾಂತರ್ಗತ ಪರಿಸರದಲ್ಲಿನ ಮಧ್ಯಮ ವರ್ಗದ ಗ್ರಾಮೀಣ ವಿದ್ಯಾವಂತ ಉದ್ಯೋಗಿಗಳ ಬಾಳ ಬವಣೆ ಇವರ ಬರಹದ ಜೀವನಾಡಿಯಾಗಿ ಮಿಡಿದಿದೆ. ಹೊಸ ಹೊಸ ಭಾವನೆ ಆಲೋಚನೆಗಳಿಗೆ ಸದಾ ತೆರೆದ ಮನಸ್ಸಿನವರಾಗಿರುವ ನಾಗರಾಜ್ ಅವರ ಬರವಣಿಗೆ ಇನ್ನೂ ಹೆಚ್ಚು ಶಕ್ತಿಸಂಪನ್ನ ವಾಗಬಲ್ಲದು ಎಂಬ ದೃಢವಿಶ್ವಾಸ ನನಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಹಾಡ್ಲಹಳ್ಳಿ ನಾಗರಾಜ್

ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...

READ MORE

Related Books