ದೇವನೂರ ಮಹಾದೇವ ಅವರ ಆಯ್ದ ಕಥೆಗಳು

Author : ದೇವನೂರ ಮಹಾದೇವ

Pages 108

₹ 75.00
Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

’ದ್ಯಾವನೂರು’ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ದೇವನೂರು ಮಹಾದೇವ ಅವರು ನಂತರ ಒಡಲಾಳ ಹಾಗೂ ಕುಸುಮಬಾಲೆ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಮಹಾದೇವ ಅವರ ಆಯ್ದ ಕತೆಗಳನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ಗ್ರಾಮೀಣ ಹಾಗೂ ದಲಿತ-ಶೋಷಿತ ಸಂವೇದನೆಯ ಕತೆಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ಅಮಾಸ, ಡಾಂಬರು ಬಂದುದು ಅವರ ಪ್ರಮುಖ ಕತೆಗಳು.

About the Author

ದೇವನೂರ ಮಹಾದೇವ
(10 June 1948)

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ  ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...

READ MORE

Related Books